ಪ್ರಧಾನಿ ಮೋದಿಗೆ ಯುಎಇಯಿಂದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

ಅಬುಧಾಬಿ, ಆ.23-ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ-ದಿ ಆರ್ಡರ್ ಆಫ್ ಜಯೆದ್ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವಿದೆ.

ಭಾರತ ಮತ್ತು ಯುಎಇ ನಡುವಣ ವಿಶೇಷ ಬಾಂಧ್ಯವದ ಧ್ಯೋತಕವಾಗಿ ಪ್ರಧಾನಿ ಮೋದಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ಹಿರಿಯ ಸಚಿವ ಶೇಖ್ ನಹಯಾನ್ ಬಿನ್ ಅಲ್ ಮುಬಾರಕ್ ನಹಯಾನ್ ತಿಳಿಸಿದ್ಧಾರೆ.

ಭಾರತವು ಯುಎಇಗೆ ವಿಶೇಷ ಆಪ್ತ ರಾಷ್ಟ್ರವಾಗಿ ಮತ್ತು ಗೌರವಾನ್ವಿತ ವಿಶ್ವಾಸಾರ್ಹ ಸಹಭಾಗಿತ್ವ ದೇಶವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಉಭಯ ದೇಶಗಳ ನಡುವೆ ಅತ್ಯುತ್ತಮ ಬಾಂಧವ್ಯ ಬಲಗೊಳಿಸುವಲ್ಲಿ ಪ್ರಧಾನಿ ನರೆಂದ್ರ ಮೋದಿ ಅವರು ವಹಿಸಿರುವ ಮಹತ್ವದ ಪಾತ್ರವನ್ನು ಪುರಸ್ಕರಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಯುಎಇ ಅಧ್ಯಕ್ಷರು ಕಳೆದ ಏಪ್ರಿಲ್‍ನಲ್ಲಿ ಘೋಷಿಸಿದ್ದರು.

ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ.

ಮೋದಿ ಇಂದು ಮತ್ತು ನಾಳೆ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ ಪ್ರವಾಸ ಕೈಗೊಂಡಿದ್ದಾರೆ, ಅಬುಧಾನಿ ರಾಜಕುಮಾರ ಶೇಖ್ ಮಹಮದ್ ಬಿನ್ ಜಯೆದ್ ಅಲಿ ನಹಯಾನ್ ಅವರನ್ನು ಭೇಟಿ ಮಾಡಿ ಚರ್ಚಿಸುವರು.

ಇವರಿಬ್ಬರು ಮಹಾತ್ಮ ಗಾಂಧಿ ಅವರ 150ನೇ ಜನ್ಮಜಯಂತಿ ಪ್ರಯುಕ್ತ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮವಿದೆ. ಅಲ್ಲದೇ ಮೋದಿ ಅರಬ್ ರಾಷ್ಟ್ರದಲ್ಲಿ ರುಪೈ ಕಾರ್ಡ್ ಅನಾವರಣಗೊಳಿಸುವರು.

ಆಗಸ್ಟ್ 24 ಮತ್ತು 25ರಂದು ಬಹರೈನ್‍ಗೆ ಮೋದಿ ಭೇಟಿ ನೀಡಲಿದ್ದಾರೆ. ಈ ಸಂಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ದಾರೆ.

ಬಳಿಕ ಅವರು ಆ.25 ಮತ್ತು 26ರಂದು ಜಿ-7 ಶೃಂಗಸಭೆಯಲ್ಲಿ ಭಾಗವಸುವರು. ಈ ಸಭೆಯಲ್ಲಿ ಪರಿಸರ, ಹಮಾಮಾನ, ವಾತಾವರಣ, ಸಾಗರ ಮತ್ತು ಡಿಜಿಟಲ್ ಪರಿವರ್ತನೆ ವಿಷಯಗಳ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ