ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ರಷ್ಯಾದಿಂದ ಮಹತ್ವದ ಸಾಧನೆ

ಮಾಸ್ಕೋ, ಆ.22-ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ರಷ್ಯಾ ಇಂದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

ವಿಶ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ರಷ್ಯಾ ಮಾನವ ರೂಪಿ ರೋಬೋವನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ರವಾನಿಸಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಎಸ್‍ಎಸ್)ದಲ್ಲಿ ಖಗೋಳ ಯಾತ್ರಿಗಳಿಗೆ ನೆರವಾಗಲು ಈ ಯಂತ್ರ ಮಾನವನಿಗೆ ತರಬೇತಿ ನೀಡುವ ಉದ್ದೇಶದಿಂದ ಹ್ಯುಮಾನೊಯ್ಡ್ ರೋಬೋವನ್ನು ಕಳುಹಿಸಲಾಗಿದೆ. ಈ ಮಾನವ ರೂಪಿ ಯಂತ್ರ ಮಾನವ ಹೆಸರು ಫೆಡೊರ್.

ಖಜಕೀಸ್ಥಾನದಲ್ಲಿ ಇಂದು ಬೆಳಗ್ಗೆ 6.38ರಲ್ಲಿ ಮಾನವ ರಹಿತ ಸುಯೇಜ್ ಗಗನನೌಕೆ ಫೆಡೊರ್‍ನನ್ನು ಹೊತ್ತು ನಭಕ್ಕೆ ಚಿಮ್ಮಿತು. ಶನಿವಾರ ಈ ಮಾನವ ರೂಪಿ ಯಂತ್ರ ಮಾನವ ನಿಗದಿತ ಸ್ಥಳವನ್ನು ತಲುಪಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೆಪ್ಟೆಂಬರ್ 17ರವರೆಗೆ ತರಬೇತಿ ಕಾರ್ಯನಿರ್ವಹಿಸಲಿದೆ.

ಸುಯೆಜ್ ಗಗನನೌಕೆ ಪೈಲಟ್ ಆಸನದಲ್ಲಿ ಈ ಯಂತ್ರಮಾನವನನ್ನು ಕೂರಿಸಿ ಅಂತರಿಕ್ಷಕ್ಕೆ ಕಳುಹಿಸಲಾಗಿದೆ. ಬಾಹ್ಯಾಕಾಶದ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ನಿಭಾಯಿಸುವಾಗ ಎದುರಾಗಬಹುದಾದ ಗಂಡಾಂತರಗಳ ಸಂದರ್ಭದಲ್ಲಿ ಈ ಮಾನವ ರೂಪಿ ಯಂತ್ರ ಮಾನವ ಸಹಕಾರಿಯಾಗಲಿದೆ.

ಇಂತಹ ರೋಬೋವನ್ನು ಈವರೆಗೂ ಯಾವುದೇ ದೇಶ ಅಂತರಿಕ್ಷಕ್ಕೆ ರವಾನಿಸಿಲ್ಲ. ಹೀಗಾಗಿ ಇದು ವಿಶ್ವದ ಪ್ರಪ್ರಥಮ ಹ್ಯುಮನೊಯ್ಡ್ ರೋಬೋ ಎನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ