ನವದೆಹಲಿ: ಜಮ್ಮು–ಕಾಶ್ಮೀರದ ವಿಚಾರವನ್ನು ಚರ್ಚಿಸಲು ಪಾಕ್ ಮತ್ತು ಭಾರತ ಸದ್ಯದಲ್ಲೇ ಮುಖಾಮುಖಿಯಾಗಲಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಭೆ ಸೇರಲಿದ್ದಾರೆ. ಮುಂದಿನ ದಿನಗಳಲ್ಲಿ ಜಮ್ಮು–ಕಾಶ್ಮೀರ ವಿವಾದ ಮತ್ತಷ್ಟು ಕಾವು ಪಡೆದುಕೊಂಡು ಹಿಂಸಾಚಾರಕ್ಕೆ ಕಾರಣವಾಗಲಿದೆ. ಈಗಾಗಲೇ 370ನೇ ವಿಧಿ ರದ್ದುಗೊಳಿಸಿದ ಭಾರತದ ನಡೆಗೆ ಪಾಕಿಸ್ತಾನ ಕೆಂಡಮಂಡಲವಾಗಿದೆ. ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿವೆ. ಹೀಗಾಗಿ ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸಿದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಟ್ರಂಪ್ ಉಭಯ ದೇಶಗಳ ಸಭೆ ಕರೆದಿದ್ದಾರೆ. ಖುದ್ದು ಟ್ರಂಪ್ ಅವರೇ ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ಜತೆಗೆ ಫೋನಿನ್ನಲ್ಲಿ ಮಾತಾಡಿ ಸಭೆ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಇಮ್ರಾನ್ ಖಾನ್ ಬಗ್ಗೆ ಟ್ರಂಪ್ ಮುಂದೆ ಮೋದಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಮಾತು ಆಲಿಸಿದ ಟ್ರಂಪ್ ಇಮ್ರಾನ್ ಖಾನ್ಗೆ ಕೆರೆ ಮಾಡಿ ಭಾರತದ ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರ ಸೂಕ್ಷ್ಮ ಮತ್ತು ಕಠಿಣ ಪ್ರದೇಶವಾಗಿದೆ. ಇಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ವಾಸಿಸುತ್ತಿದ್ದು, ಇಬರ ನಡುವೇ ಸಾಮರಸ್ಯ ಇದೆ ಎಂದು ನಾನು ಹೇಳುವುದಿಲ್ಲ. ಆದರೆ, ಅವರ ಸಾಮರಸ್ಯಕ್ಕೆ ಅನುವಾಗುವಂತೆ ನನ್ನಿಂದ ಏನು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಉತ್ತಮವಾಗಿ ಮಾಡುತ್ತೇನೆ ಎಂದು ಟ್ರಂಪ್ ಹೇಳಿದರು.
ಈ ಮಧ್ಯೆ ಮುಂದಿನ ತಿಂಗಳ 27ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಯಲಿದೆ. ಈ ವೇಳೆ ಸಭೆಯನ್ನುದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾನ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆ ಮೇಲೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಕಾಳಗ ನಡೆಯಲಿದೆ.
ಈಗಾಗಲೇ ಮೋದಿಯವರು ಯಾವ ವಿಚಾರಗಳನ್ನು ಮಾತನಾಡಬೇಕು ಎಂಬ ಬಗ್ಗೆ ಟಿಪ್ಪಣಿ ಮಾಡಿಕೊಂಡಿದ್ದಾರೆ. ಸುಸ್ಥಿರ ಅಭಿವೃದ್ದಿ, ಜಾಗತಿಕ ಆರೋಗ್ಯಸ್ಥಿತಿ, ಹವಾಮಾನ ಬದಲಾವಣೆ, ಕಾಶ್ಮೀರ ವಿವಾದದ ಬಗ್ಗೆ ಮೋದಿ ಮಾತನಾಡಲಿದ್ದಾರೆ. ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಉಳಿದ ನಾಯಕರು ಮಾತನಾಡಲಿದ್ದಾರೆ.