ಶೆಟ್ಟರ್, ಈಶ್ವರಪ್ಪ, ಅಶೋಕ್, ಸುರೇಶ್ ಕುಮಾರ್, ಶ್ರೀರಾಮುಲು ಸೇರಿ 17 ಸಚಿವರ ಪ್ರಮಾಣ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ನಿನ್ನೆ ಮಧ್ಯರಾತ್ರಿಯೇ ಬಿಜೆಪಿ ಹೈಕಮಾಂಡ್ಕೊನೆಗೂ ಪಟ್ಟಿ ಅಂತಿಮಗೊಳಿಸಿದ್ದು, 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮುಳಬಾಗಿಳು ಪಕ್ಷೇತರ ಶಾಸಕ ಎಚ್​​. ನಾಗೇಶ್ ಅವರಿಗೂ​​ ಸಚಿವರಾಗುವ ಅವಕಾಶ ಸಿಕ್ಕಿದೆ.

ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಫೋನ್​​ ಮಾಡಿ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ತಿಳಿಸಿದರು. ಬಳಿಕ ಹೈಕಮಾಂಡ್​​ ಅಂತಿಮಗೊಳಿಸಿದ್ದ ಶಾಸಕರಿಗೆ ಯಡಿಯೂರಪ್ಪನವರೇ ಖುದ್ದು ಫೋನ್​​ ಮಾಡಿ, ಇಂದು ಮಂಗಳವಾರ ಬೆಳಗ್ಗೆ 11.30ಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.

ಬಿಜೆಪಿ ಹೈಕಮಾಂಡ್​​ ಕೊನೆಗೂ ನೂತನ ಸಚಿವರ ಪಟ್ಟಿ ಫೈನಲ್ ಮಾಡಿದೆ. 17 ಸಚಿವರ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ. ಒಬ್ಬ ಪಕ್ಷೇತರ ಸೇರಿದಂತೆ 17 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಚಿವರ ಅಂತಿಮ ಪಟ್ಟಿ ಹೀಗಿದೆ

  • ಗೋವಿಂದ ಕಾರಜೋಳ
  • ಅಶ್ಚಥ್ ನಾರಯಣ್
  • ಲಕ್ಷ್ಮಣ್ ಸವಧಿ
  • ಕೆ ಎಸ್ ಈಶ್ಚರಪ್ಪ
  • ಆರ್ ಅಶೋಕ್
  • ಜಗದೀಶ್ ಶೆಟ್ಟರ್
  • ಶ್ರೀರಾಮುಲು
  • ಸುರೇಶ್ ಕುಮಾರ್
  • ವಿ ಸೋಮಣ್ಣ
  • ಸಿ ಟಿ ರವಿ
  • ಬಸವರಾಜ್ ಬೊಮ್ಮಾಯಿ
  • ಕೋಟಾ ಶ್ರೀನಿವಾಸ್ ಪೂಜಾರಿ
  • ಮಾಧುಸ್ವಾಮಿ
  • ಸಿ ಸಿ ಪಾಟೀಲ್
  • ಹೆಚ್ ನಾಗೇಶ್
  • ಪ್ರಭು ಚೌಹಾಣ್
  • ಶಶಿಕಲಾ ‌ಜೊಲ್ಲೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ