ವಿಶಾಖಪಟ್ಟಣಂ-ವಿಜಯವಾಡ ನಡುವೆ ಸಂಚರಿಸಲಿರುವ ಡಬಲ್ ಡೆಕರ್ ರೈಲು

ನವದೆಹಲಿ, ಆ.19- ಬೆಂಗಳೂರು-ಕೊಯಮತ್ತೂರು ನಡುವೆ ಸಂಚರಿಸುತ್ತಾ ಜನಪ್ರಿಯವಾಗಿರುವ ಉದಯ ಡಬಲ್ ಡೆಕರ್ ಎಕ್ಸ್‍ಪ್ರೆಸ್‍ನನ್ನು ಇನ್ನೂ ಎರಡು ಮಾರ್ಗಗಳಲ್ಲಿ ಸಂಚಾರ ಸೇವೆಗೆ ಸಮರ್ಪಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಎರಡನೆ ಉದಯ್ ಅಥವಾ ಉತ್ಕøಷ್ಟ ಡಬಲ್ ಡೆಕ್ಕರ್ ಎಕ್ಸ್‍ಪ್ರೆಸ್ ರೈಲು ವಿಶಾಖಪಟ್ಟಣಂ-ವಿಜಯವಾಡ ನಡುವೆ ಸದ್ಯದಲ್ಲಿಯೇ ಸಂಚರಿಸಲಿದೆ.
ಮೂರನೆ ಉದಯ್ ಎಕ್ಸ್‍ಪ್ರೆಸ್ ಬೆಂಗಳೂರು ಮತ್ತು ಚೆನ್ನೈ ನಗರ ನಡುವೆ ಸಂಚಾರಕ್ಕೆ ಬಿಡಲು ನಿರ್ಧರಿಸಲಾಗಿದೆ.

ಈ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎರಡು ಡಬಲ್ ಡೆಕ್ಕರ್ ರೈಲುಗಳನ್ನು ಸದ್ಯದಲ್ಲಿಯೇ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಪೂರ್ವ ಕರಾವಳಿ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಡಬಲ್ ಡೆಕ್ಕರ್ ರೈಲು 9 ಬೋಗಿಗಳು ಮತ್ತು ಎರಡು ಕಾರ್‍ಗಳನ್ನು ಹೊಂದಿರುತ್ತದೆ. ಸಂಪೂರ್ಣ ಹವಾ ನಿಯಂತ್ರಿತ ಬೋಗಿಯಲ್ಲಿ ವೈಫೈ ಸೌಲಭ್ಯ, ಮೆತ್ತನೆಯ ಆಸನ ಮತ್ತು ಡಿಸ್‍ಪ್ಲೇ ಸ್ಕ್ರೀನ್ ವ್ಯವಸ್ಥೆ ಒಳಗೊಂಡಿರುತ್ತದೆ.

ಈ ಡಬಲ್ ಡೆಕ್ಕರ್‍ನಲ್ಲಿ ಮೊದಲ ಮೇಲ್ಭಾಗದಲ್ಲಿ 50 ಜನರು, ಕೆಳ ಭಾಗದಲ್ಲಿ 48 ಪ್ರಯಾಣಿಕರು ಮತ್ತು ಹಿಂಬದಿಯಲ್ಲಿ 22 ಜನರು ಪ್ರಯಾಣಿಸಬಹುದು.
ಈ ಡಬಲ್ ಡೆಕ್ಕರ್‍ನ ಮೂರು ಕೋಚ್‍ಗಳಲ್ಲಿ 104 ಮಂದಿ ಕುಳಿತು ಊಟ ಮಾಡುವ ವಿಶೇಷ ಡೈನಿಂಗ್ ಟೇಬಲ್ ವ್ಯವಸ್ಥೆ ಇರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ