ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವ ಹಿನ್ನೆಲೆ-ಗಣೇಶಮೂರ್ತಿ ವಿಸರ್ಜನೆಗೂ ಎದುರಾದ ವಿಘ್ನ

ಬೆಂಗಳೂರು, ಆ.19-ರಾಜ್ಯಸರ್ಕಾರದಿಂದ 2019-20ನೇ ಸಾಲಿನ ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ವಿಘ್ನ ನಿವಾರಕ ಗಣೇಶಮೂರ್ತಿ ವಿಸರ್ಜನೆಗೂ ವಿಘ್ನ ಎದುರಾಗಿದೆ.

ಗಣೇಶ ಹಬ್ಬ ಹತ್ತಿರವಾಗುತ್ತಿದ್ದರೂ ಗಣೇಶಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಟೆಂಡರ್‍ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ದಿನಗಳಿಂದ ಸಮಸ್ಯೆಆಗಿರುವ ಆನ್‍ಲೈನ್ ಟೆಂಡರ್ ವ್ಯವಸ್ಥೆ ಇ-ಪ್ರಾಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿರುವ ಪಾಲಿಕೆ, ಪ್ರತಿವರ್ಷ ಹಬ್ಬಕ್ಕೆ ಇನ್ನು ಒಂದು ತಿಂಗಳು ಬಾಕಿ ಇರುವಾಗಲೇ ಟೆಂಡರ್‍ಕರೆದು ಪ್ರಕ್ರಿಯೆ ಮುಗಿಸುತ್ತಿತ್ತು.

ಟೆಂಡರ್ ಪಡೆದವರು ಗಣೇಶಮೂರ್ತಿ ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಟೆಂಡರ್ ಸಿಗದ ಕಾರಣ ಗಣೇಶ ವಿಸರ್ಜನೆಗೆ ತೊಡಕು ಉಂಟಾಗಲಿದೆ.

ಪಾಲಿಕೆ ನೀತಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್‍ಮಾತನಾಡಿ, ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮವಾಗದಿರುವುದು ನಿಜ. ಇ-ಪ್ರಾಕ್ಯೂರ್‍ಮೆಂಟ್‍ನಲ್ಲಿ ತಾಂತ್ರಿಕದೋಷ ಇರುವುದು ನಿಜ. ಕೆಆರ್‍ಐಡಿಎಲ್ ಮೂಲಕ ಟೆಂಡರ್ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ನಗರದಲ್ಲಿ ಗಣೇಶ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ