ನಗರದಲ್ಲಿ ನಡೆದ ಬ್ಯಾಂಕ್ ಆಫ್ ಮಹಾರಾಷ್ಟ್ರ ಸಭೆ

ಬೆಂಗಳೂರು, ಆ.19- ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಆಲೋಚನೆಗಳನ್ನು ಮತ್ತು ಅವುಗಳ ಕಾರ್ಯ ಕ್ಷಮತೆಯನ್ನು ಪರಿಶೀಲಿಸುವ ಮತ್ತು ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ನಗರದಲ್ಲಿ ಸಭೆಯನ್ನು ಆಯೋಜಿಸಿತ್ತು.

ಮೂಲ ಸೌಕರ್ಯ/ಕೈಗಾರಿಕೆ (ಎಂಎಸ್‍ಎಂಇ, ಕೃಷಿ ಇತರೆ ಚಟುವಟಿಕೆ)ಗಳಿಗೆ ಸಾಲ ಸೌಲಭ್ಯ , ತೋಟಗಾರಿಕೆ, ಜಲಶಕ್ತಿ , ಗೃಹ ಸಾಲ, ಮುದ್ರಾ, ಶೈಕ್ಷಣಿಕ ಸಾಲ, ರಫ್ತು ಸಾಲ, ಹಸಿರು ಆರ್ಥಿಕತೆ , ಸ್ವಚ್ಛ್ ಸಾಲ, ಮಹಿಳಾ ಸಬಲೀಕರಣ, ನಗದು ರಹಿತ / ಡಿಜಿಟಲ್ ಆರ್ಥಿಕತೆ, ಎಟಿಎಂ ಬಳಕೆ ಮತ್ತು ಕಾರ್ಯ ಕ್ಷಮತೆ, ಸರಳ ಜೀವನ ಮತ್ತು ಹಸಿರು ಆರ್ಥಿಕತೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಬಗ್ಗೆ ಕೂಲಂಕುಷವಾಗಿ ಸಮಲೋಚನೆ ನಡೆಸಿದ್ದು, ಹಲವಾರು ಸಲಹೆಗಳು ಬಂದಿವೆ. ಅದರಲ್ಲಿ ಪ್ರಮುಖವಾಗಿ ವಿವಿಧ ಬ್ಯಾಂಕ್‍ಗಳ ಜತೆ ಪೂರಕವಾಗಿ ಕಾರ್ಯ ನಿರ್ವಹಿಸುವುದು, ಗ್ರಾಹಕರಿಗೆ ಉತ್ತಮ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಗತಿಗೆ ಕೈ ಜೋಡಿಸಲಾಗುವುದು.

ಈ ನಿಟ್ಟಿನಲ್ಲಿ ಇಂದು ಪ್ರಸ್ತಾಪವಾದ ಎಲ್ಲಾ ವಿವರಗಳನ್ನು ಕೇಂದ್ರ ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಉದ್ಯಮಿ ಸ್ನೇಹಿಯಾಗಿ, ನಾಗರಿಕರು , ಹಿರಿಯ ನಾಗರಿಕರು, ರೈತರು, ಮಹಿಳೆಯರಿಗೆ, ಬ್ಯಾಂಕಿಂಗ್ ಕ್ಷೇತ್ರ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಬ್ಯಾಂಕ್‍ನ ಬೆಂಗಳೂರು ವಲಯದ ವ್ಯವಸ್ಥಾಪಕರಾದ ಚೈತ್ರಾ ದತ್ತಾರ್ , ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎನ್. ಮುನಿರಾಜು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ