ರಾಜ್ಯದಲ್ಲಿ 26 ವರ್ಷಗಳ ಬಳಿಕ ಲಕೋಟೆ ಸಂಸ್ಕøತಿ

ಬೆಂಗಳೂರು,ಆ.18-ರಾಜ್ಯ ರಾಜಕಾರಣದಲ್ಲಿ 26 ವರ್ಷಗಳ ಬಳಿಕ ಮತ್ತೆ ಲಕೋಟೆ ಸಂಸ್ಕøತಿ ಮುನ್ನೆಲೆಗೆ ಬಂದೀತೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಕಳೆದ 1992ರಲ್ಲಿ ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರ ಬದಲಿಗೆ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಲು ಲಕೋಟೆ ಸಂಸ್ಕøತಿಯನ್ನು ಬಳಸಲಾಗಿತ್ತು.

ಆಗ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿತ್ತು.ಆದರೆ ಕಾಂಗ್ರೆಸ್ ಹೈಕಮಾಂಡ್‍ನಿಂದ ಬಂದ ಲಕೋಟೆಯಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಹೆಸರಿತ್ತು.

ಕೃಷ್ಣ ಅವರ ಬದಲಾಗಿ ಹೈಕಮಾಂಡ್ ಆದೇಶದಂತೆ ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾದರು.ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಂಪುಟ ರಚನೆ ಮಾಡಲು ಮಂಗಳವಾರ ಪ್ರಮಾಣ ವಚನಕ್ಕೆ ಸಮಯ ನಿಗದಿಪಡಿಸಲಾಗಿದೆ.

ಮತ್ತೆ ರಾಜ್ಯದಲ್ಲಿ ಲಕೋಟೆ ಸಂಸ್ಕøತಿ ತಲೆ ಎತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸಂಪುಟ ರಚನೆ ಮಾಡಲು ಹಸಿರುನಿಶಾನೆ ತೋರಿದ್ದಾರೆ.ಆದರೆ ಸಚಿವರಾಗುವ ಶಾಸಕರ ಪಟ್ಟಿಯನ್ನು ಕಳುಹಿಸುವುದಾಗಿ ಹೇಳಿದೆ.

ಬಿಜೆಪಿ ಮೂಲಗಳ ಪ್ರಕಾರ ನೂತನ ಸಚಿವರ ಪಟ್ಟಿ ನಾಳೆ ಹೈಕಮಾಂಡ್‍ನಿಂದ ಬರುವ ಸಾಧ್ಯತೆಗಳಿವೆ. ಮುಚ್ಚಿದ ಲಕೋಟೆಯಲ್ಲಿ ನೂತನ ಸಚಿವರ ಹೆಸರುಳ್ಳ ಪಟ್ಟಿ ಮುಖ್ಯಮಂತ್ರಿ ಕೈ ಸೇರುವ ಸಾಧ್ಯತೆಗಳಿವೆ.

ಹೈಕಮಾಂಡ್ ಕಳುಹಿಸಲಿರುವ ಪಟ್ಟಿಯಲ್ಲಿ ಯಾರಿರುತ್ತಾರೆಂಬುದು ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಿಗೆ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನವು ಕಾಡತೊಡಗಿದೆ.

1992ರಲ್ಲೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಧಿಕಾರದಲ್ಲಿತ್ತು.ಈಗ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಧಿಕಾರದಲ್ಲಿದೆ.ಪಕ್ಷ ಬದಲಾದರೂ ಸಂಪ್ರದಾಯ ಮಾತ್ರ ಒಂದೇ ರೀತಿ ಇದ್ದಂತಿದೆ.ಆಗ ಮುಖ್ಯಮಂತ್ರಿಯೊಬ್ಬರ ಹೆಸರು ಮಾತ್ರ ಕಾಂಗ್ರೆಸ್ ಹೈಕಮಾಂಡ್‍ನಿಂದ ರವಾನೆಯಾಗಿತ್ತು.

ಈಗ ಸಂಪುಟ ಸೇರುವವರ ಪಟ್ಟಿ ಬಿಜೆಪಿ ಹೈಕಮಾಂಡ್‍ನಿಂದ ರಾಜ್ಯಕ್ಕೆ ರವಾನೆಯಾಗುತ್ತಿದೆ.ಸುಮಾರು 13ರಿಂದ 15 ಸಚಿವರಾಗುವವರ ಹೆಸರನ್ನು ಕಳುಹಿಸಲಾಗುತ್ತಿದೆ.

ರಾಜ್ಯದ ರಾಜಕೀಯಕ್ಕೂ ರಾಷ್ಟ್ರೀಯ ಪಕ್ಷಗಳ ಲಕೋಟೆಯ ಸಂಸ್ಕøತಿಗೂ ಒಂದಲ್ಲ ಒಂದು ರೀತಿಯ ಸಂಬಂಧ ಇದ್ದಂತಿದೆ. ಬಿಜೆಪಿಯಲ್ಲಿ ಸಚಿವರಾಗುವವರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಲಾಬಿ, ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಚಿವರಾಗುವವರ ಪಟ್ಟಿಯನ್ನು ಅಂತಿಮಗೊಳಿಸುವುದನ್ನು ಕೊನೆ ಘಳಿಗೆವರೆಗೂ ಬಿಜೆಪಿ ಹೈಕಮಾಂಡ್ ರಹಸ್ಯವಾಗಿಟ್ಟಿದೆ. ಸಚಿವರಾಗುವವರ ಪಟ್ಟಿ ಬಹಿರಂಗಗೊಂಡರೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳಬಹುದು ಎಂಬ ಉದ್ದೇಶದಿಂದ ರಹಸ್ಯ ಪಟ್ಟಿ ರವಾನೆ ತಂತ್ರವನ್ನು ಅನುಸರಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಆದರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಲಕೋಟೆ ಬದಲಾಗಿ ಇಮೇಲ್ ಸೇರಿದಂತೆ ಅಂತಾರ್ಜಾಲ ವ್ಯವಸ್ಥೆಯ ಮೂಲಕ ಸಚಿವರಾಗುವವರ ಪಟ್ಟಿಯನ್ನು ಕಳುಹಿಸಿಕೊಡಬಹುದು.ಇದು ಲಕೋಟೆಗಿಂತಲೂ ತ್ವರಿತವಾಗಿ ಸಂಬಂಧಪಟ್ಟವರ ಕೈ ಸೇರಲಿದೆ.

ಈ ಆಧುನಿಕ ವ್ಯವಸ್ಥೆಯಲ್ಲೂ ಕೂಡ ರಹಸ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದ್ದು, ಮಾಹಿತಿಯನ್ನು ಕ್ಷಿಪ್ರವಾಗಿ ತಲುಪಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ