ನವದೆಹಲಿ, ಆ. 12- ದುರ್ಗಮ ಅರಣ್ಯ, ಪರ್ವತ, ಭೋರ್ಗರೆಯುತ್ತಿರುವ ನದಿ ಮತ್ತು ವನ್ಯಜೀವಿಗಳ ತಾಣವಾಗಿರುವ ಪ್ರದೇಶದಲ್ಲಿ ಮೋದಿಯವರ ಜಂಗಲ್ ಅಡ್ವೆಂಚರ್ ಇಂದು ರಾತ್ರಿ 9ಗಂಟೆಗೆ ಡಿಸ್ಕವರಿ ಚಾನಲ್ನಲ್ಲಿ ಪ್ರಸಾರವಾಗಲಿದೆ.
ಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ವಿಶ್ವ ವಿಖ್ಯಾತ ನಾಯಕರಾಗಿರುವ ಮೋದಿ ಹಾಗೂ ಅಪ್ರತಿಮ ಸಾಹಸಿ ಮತ್ತು ಮ್ಯಾನ್ ವರ್ಸ್ ವೈಲ್ಡ್ ನಿರೂಪಕ ಬೇರ್ಗಿಲ್ಸ್ ಈ ಕಾರ್ಯಕ್ರಮದಲ್ಲಿ ದಟ್ಟಡವಿಯಲ್ಲಿ ಕೈಗೊಳ್ಳುವ ಸಾಹಸಗಳು ಇಂದಿನ ಎಪಿಸೋಡ್ನಲ್ಲಿ ಪ್ರಸಾರವಾಗಲಿದೆ.
180 ರಾಷ್ಟ್ರಗಳಲ್ಲಿ ಐದು ಭಾಷೆಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ವಿಶ್ವಾದ್ಯಂತ ಭಾರೀ ಕುತೂಹಲ ಕೆರಳಿಸಿದೆ.
ಮೋದಿ ಮತ್ತು ಬೇರ್ ಸಾಹಸದ ತುಣುಕುಗಳು 45ನಿಮಿಷದ ಪೋ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಡಿಸ್ಕವರಿ ಚಾನಲ್ ಈ ವಿಶೇಷ ಸಂಚಿಕೆಯನ್ನು ನಮ್ಮ ಕಾರ್ಯಕ್ರಮದ ಅತ್ಯಂತ ಹೆಮ್ಮೆಯ ಎಪಿಸೋಡ್ ಎಂದು ಬಣ್ಣಿಸಿದೆ.
ಎರಡನೇ ಭಾರಿ ಪ್ರಧಾನ ಮಂತ್ರಿಯಾಗಿ ಹತ್ತು ಹಲವು ಹೊಸ ಯೋಜನೆಗಳು ಮತ್ತು ಪ್ರಯೋಗಗಳ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿಯವರು ಜಂಗಲ್ ಅಡ್ವೆಂಚರ್ ಕಾರ್ಯಕ್ರಮವನ್ನು ವೀಕ್ಷಿಸಿಲು ಲಕ್ಷಾಂತರ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.