ಆಯಿಲ್ ಮತ್ತು ಗ್ಯಾಸ್‍ಗಳನ್ನು ಜವಬ್ದಾರಿ ಬೆಲೆಯೆತ್ತ ಕೊಂಡಯ್ಯುವ ಆಗತ್ಯವಿದೆ: ಪ್ರಧಾನಿ ಮೋದಿ

ನೊಯೀಡಾ,ಫೆ.11-ಉತ್ಪಾದಕರು ಮತ್ತು ಗ್ರಾಹಕರು ಇವರಿಬ್ಬರ ಹಿತಾಸಕ್ತಿಗಳನ್ನು ಸರಿದೂಗಿಸಲು ಗ್ಯಾಸ್ ಮತ್ತು ಆಯಿಲ್ ಬೆಲೆಯಲ್ಲಿ ಜವಬ್ದಾರಿಯ ಆಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಇಂದು ಗ್ರೇಟರ್ ನೊಯೀಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 13ನೇ ಅಂತರಾಷ್ಟ್ರೀಯ ಆಯಿಲ್ ಮತ್ತು ಗ್ಯಾಸ್ ಸಮ್ಮೇಳನ- 2019 ನ್ನು ಉದ್ಘಾಟಿಸಿದರು.

ಮೂರು ದಿನಗಳ ಈ ಧ್ವೈವಾರ್ಷಿಕ ಕಾರ್ಯಕ್ರಮ ಭಾನುವಾರ ಭಾರತ್ ಎಕ್ಸ್ಪೋ ಮಾರ್ಟ್‍ನಲ್ಲಿ ಆರಂಭವಾಯಿತು. ತೈಲ ಮತ್ತು ಆನಿಲಗಳಿಗೆ ಬೇಕಾದ ಆವಶ್ಯಕ ಶಕ್ತಿ ತುಂಬಲು ಪಾರದರ್ಶಕ ಮತ್ತು ಹೊಂದಿಕೊಳ್ಳುವ ಮಾರುಕಟ್ಟೆಗಳ ಆಗತ್ಯವಿದೆ ಎಂದು ಪ್ರದಾನಿ ಹೇಳಿದರು.

ಜಾಗಿತಿಕ ಶಕ್ತಿಯ ಆರೇನಾದಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ ಎಂದು ಪ್ರಧಾನಿ ಹೇಳಿದರು. ಮಾರುಕಟ್ಟೆಯಲ್ಲಿ ಪೂರೈಕೆ ಮತ್ತು ಬಳಕೆಯಲ್ಲಿ ಬದಲಾಗುತ್ತದೆ ಎಂದು ಹೇಳಿದರು. ಶಕ್ತಿಯ ಬಳಕೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬದಲಾಗುತ್ತಿದೆ ಎಂದು ಪ್ರಧಾನಿ ಹೆಳಿದರು.

ಅಗ್ಗದ ನವೀಕರಿಸಬಹುದಾದ ಶಕ್ತಿ, ತಂತ್ರಜ್ಞಾನಗಳು ಮತ್ತು ಡಿಜಿಟಲ್ ಅನ್ವಯಿಕೆಗಳ ನಡುವೆ ಒಗ್ಗೂಡಿಕೆ ಲಕ್ಷಣಗಳಿವೆ ಎಂದು ಹೇಳಿದರು. ಇದರಿಂದ ಸಮರ್ಥನೀಯ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ವೇಗವನ್ನು ಹೆಚ್ಚಿಸಬಹುದು. ಹವಾಮಾನ ಬದಲಾವಣೆಗಳನ್ನು ನಿಭಾಯಿಸಲು ದೇಶಗಳು ಒಂದಾಗಲಿವೆ ಇದು ಸಂತೋಷದ ವಿಷಯ ಎಂದು ಪ್ರಧಾನಿ ಹೇಳಿದರು.

ಈ ಕ್ಷೇತ್ರದಲ್ಲಿ ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪೆಟ್ರೋಟಿಕ್ ಒಂದು ವೇಧಿಕೆಯಾಗಿದೆ ಎಂದು ಹೇಳಿದರು. ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಶಕ್ತಿಯು ಪ್ರಮುಖವಾಗಿದೆ ಮತ್ತು ಇದಕ್ಕ ನ್ಯಾಯ ಒದಗಿಸುವುದು ಭಾರತದ ಪ್ರಮುಖ ಆಧ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಬ್ಲೂ ಪ್ಲೇಮ್ ರೆವಲ್ಯೂಷನ್ ದೇಶದಲ್ಲಿ ಪ್ರಗತಿಯಲ್ಲಿದೆ ಮತ್ತು ಉಜ್ವಲ ಯೋಜನೆಯಡಿ ಮೂರು ವರ್ಷಗಳಲ್ಲಿ 64 ದಶಲಕ್ಷ ಮನೆಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಸಂದಂರ್ಭದಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಆನಿಲ ಸಚಿವ ಧರ್ಮೇಂದ್ರ ಪ್ರಧಾನ್, ಶಕ್ತಿ ಇಂದನವನ್ನು ಒದಗಿಸುವಲ್ಲಿ ಭಾರತ ಮಹತ್ತರವಾದ ಹೆಜ್ಜೆಯಿಟ್ಟಿದೆ ಎಂದು ಹೇಳಿದರು. ಉಜ್ವಲ ಯೋಜನೆ ಮತ್ತು ನಗರ ಆನಿಲ ಹಂಚಿಕೆ ಜಾಲ ವಿಸ್ತರಣೆಯಿಂದ ಜನರಿಗೆ ಒಳ್ಳೆಯ ಅಡುಗೆ ಆನಿಲ ದೊರೆಯುತ್ತಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ