ವಿಜ್ಞಾನ ಸಾಧನೆಯ ‘ವಿಕ್ರಮ’ ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ನವದೆಹಲಿ: ಜಾಗತಿಕ ವೈಜ್ಞಾನಿಕ ಸಮೂಹಕ್ಕೆ ಕುತೂಹಲ ಮೂಡಿಸಿರುವ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ತನನ ಪಾದಾರ್ಪಣೆ ಮಾಡಲಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದ, ಬಾಹ್ಯಾಕಾಶ ಸಂಸೋಧನೆಗೆ ಬೃಹತ್ ಸಂಸ್ಥೆಯೊಂದ

ನ್ನು ಹುಟ್ಟುಹಾಕಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಂಸ್ಥಾಪಕ ಡಾ. ವಿಕ್ರಂ ಸಾರಾಭಾಯ್ ಇಂದು ನಮ್ಮೊಂದಿಗಿದ್ದಿದ್ದರೆ ಅದೆಷ್ಟು ಸಂತೋಷಪಡುತ್ತಿದ್ದರೋ…

ಹೌದು, ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ ‘ವಿಕ್ರಮ’ ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹರೆಂದೇ ಹೆಸರಾದ ವಿಕ್ರಮ್ ಸಾರಾಭಾಯ್ ಅವರು ಪ್ರಶಸ್ತಿ ವಿಜೇತ ಭೌತವಿಜ್ಞಾನಿ, ಕೈಗಾರಿಕೋದ್ಯಮಿ ಮತ್ತು ಸಂಸೋಧನಾ ತಜ್ಞ.

ಡಾ.ವಿಕ್ರಂ ಸಾರಾಭಾಯ್ ಅವರ 100ನೇ ಜನ್ಮದಿನೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್ ಅರ್ಪಿಸಿದೆ. ಈ ಡೂಡಲ್ ಅನ್ನು ಮುಂಬೈ ಮೂಲದ ಕಲಾವಿದ ಪವನ್ ರಾಜೂರ್ಕರ್ ಸಿದ್ಧಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ