ಮುಂದುವರಿದ ತ್ರಿವಳಿ ತಲಾಕ್

ಮುಝಫರ್‍ನಗರ್, ಆ.8-ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಬದುಕಿನಲ್ಲಿ ರಕ್ಷಣೆ ನೀಡುವ ತ್ರಿವಳಿ ತಲಾಖ್ ನಿಷೇಧ ಅಧಿನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರೂ ಸ್ಥಳದಲ್ಲೇ ವಿವಾಹ ವಿಚ್ಛೇದನ ನೀಡುವ ಪದ್ಧತಿ ಮುಂದುವರೆದಿದೆ.

ಕುವೈತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತರಪ್ರದೇಶದ ವ್ಯಕ್ತಿಯೊಬ್ಬ ವ್ಯಾಟ್ಸಾಪ್ ಮೂಲಕ ತನ್ನ ಪತ್ನಿಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿರುವ ಘಟನೆ ವರದಿಯಾಗಿದೆ. ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಪತ್ನಿ ಪೊಲೀಸ್ಠಾಣೆಗೆ ದೂರು ನೀಡಿ ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಕುಪಿತಗೊಂಡ ವ್ಯಕ್ತಿ ತ್ರಿವಳಿ ತಲಾಖ್ ನೀಡಿದ್ದಾನೆ.

ಈತ ಕುವೈತ್‍ನಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಂದಲೇ ವ್ಯಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಸಂಬಂಧ ಮುಝಫರ್‍ನಗರ್ ಜಿಲ್ಲೆಯೆ ಸಿಖೆಡಾ ಪೊಲೀಸ್ಠಾಣೆಯ ವ್ಯಾಪ್ತಿಯ ಬಿಹಾರಿ ಗ್ರಾಮದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಮುಂದುವರೆದಿದೆ ಎಂದು ಠಾಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ