ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ಹನಿಮೂನ್ ಫೋಟೋ ಹಂಚಿಕೊಂಡು ತಮ್ಮ ಮದುವೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ರಾಖಿ ಸಾವಂತ್ ಎನ್ಆರ್ಐ ಉದ್ಯಮಿಯನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ರಾಖಿ ನಾನು ಮದುವೆಯಾಗಿಲ್ಲ, ಕೇವಲ ಬ್ರೈಡಲ್ ಫೋಟೋಶೂಟ್ ಮಾಡಿಸಿದೆ ಎಂದು ಉತ್ತರಿಸಿದ್ದರು. ಸದ್ಯ ಈಗ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹನಿಮೂನ್ ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ಆಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕೆಯೊಂದರಲ್ಲಿ ಮಾತನಾಡಿದ ರಾಖಿ, ನಾನು ಹೆದರಿಕೊಂಡಿದೆ. ಹೌದು ನಾನು ಮದುವೆಯಾಗಿದ್ದೇನೆ. ನಾನು ಈ ಸುದ್ದಿಯನ್ನು ಈಗ ಅಧಿಕೃತವಾಗಿ ಹೇಳುತ್ತಿದ್ದೇನೆ. ನನ್ನ ಪತಿಯ ಹೆಸರು ರಿತೇಶ್ ಹಾಗೂ ಅವರು ಲಂಡನ್ನಲ್ಲಿದ್ದಾರೆ. ಈಗಾಗಲೇ ಅವರು ಲಂಡನ್ಗೆ ಹೋಗಿದ್ದಾರೆ. ನನ್ನ ವೀಸಾದ ಕೆಲಸ ನಡೆಯುತ್ತಿದೆ. ವೀಸಾ ಕೆಲಸ ಮುಗಿದ ನಂತರ ನಾನು ಅವರೊಂದಿಗೆ ಸೇರುತ್ತೇನೆ ಎಂದು ತಿಳಿಸಿದ್ದರು.
ಬಳಿಕ ಮಾತನಾಡಿದ ಅವರು, ಭಾರತದಲ್ಲಿ ನನಗೆ ಕೆಲಸ ಸಿಕ್ಕರೆ ನಾನು ಖಂಡಿತವಾಗಿ ಮಾಡುತ್ತೇನೆ. ನನಗೆ ಟಿವಿ ಶೋ ನಿರ್ಮಿಸಬೇಕು ಎಂಬ ಕನಸ್ಸಿತ್ತು. ಈಗ ಇದು ನನಸ್ಸಾಗುತ್ತಿದೆ. ನನಗೆ ಇಂತಹ ಅದ್ಭುತ ಪತಿ ನೀಡಿದ್ದಕ್ಕೆ ದೇವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಪ್ರಭು ಚಾವ್ಲಾ ಅವರ ಜೊತೆ ನನ್ನ ಮೊದಲ ಸಂದರ್ಶನ ನೋಡಿ ರಿತೇಶ್ ನನ್ನ ಅಭಿಮಾನಿ ಆಗಿದ್ದರು. ಬಳಿಕ ಅವರು ನನಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡುತ್ತಿದ್ದರು. ಹೀಗೆ ನಮ್ಮಿಬ್ಬರ ಸ್ನೇಹ ಶುರುವಾಯಿತು. ಸ್ನೇಹ ಪ್ರೀತಿಗೆ ತಿರುಗಿತ್ತು ಎಂದರು.
ಒಂದೂವರೆ ವರ್ಷದ ಹಿಂದೆ ಇದೆಲ್ಲಾ ನಡೆಯಿತು. ರಿತೇಶ್ ನನಗೆ ಪರಿಚಯವಾದಾಗ ನಾನು ಇವರ ಪತ್ನಿ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದೆ. ಈಗ ನನ್ನ ಕನಸ್ಸು ಕೂಡ ನಿಜವಾಗಿದೆ ಎಂದು ಹೇಳಿದ್ದಾರೆ.