ಕಂಟ್ರಾಕ್ಟರ್‍ಗಳು ಕಾಮಗಾರಿಗಳನ್ನು ವೇಗವಾಗಿ ಮಾಡಿಸಬೇಕು-ಮೇಯ,ರ್ ಗಂಗಾಬಿಕೆ

ಕೆ.ಆರ್.ಪುರ, ಆ.5-ಕಂಟ್ರಾಕ್ಟರ್‍ಗಳು ಕಾಮಗಾರಿಗಳನ್ನು ವೇಗವಾಗಿ ಮಾಡಿಸಲು ಮೇಯರ್ ಗಂಗಾಂಭಿಕೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಹೊರಮಾವು ಬಿಬಿಎಂಪಿ ಕಚೇರಿಗೆ ದಿಢೀರ್ ಭೆ ೀಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ಮಧ್ಯೆ ಕೋ ಆರ್ಡಿನೇಷನ್ ಇಲ್ಲದೇ ಇದ್ದರೆ ಮಾತ್ರ ಸಮಸ್ಯೆಗಳು ಉದ್ಬವವಾಗುತ್ತದೆ.ಇದನ್ನು ಸರಿಪಡಿಸಿಕೊಂಡು ಸಾರ್ವನಿಕರ ಸಮಸ್ಯೆಗಳನ್ನು ವೇಗವಾಗಿ ಬಗೆಹರಿಸಿ ಎಂದರು.

ಹೊರಮಾವು ಭಾಗದ ಕೆಲವು ಹಳ್ಳಿಗಳು 110 ಹಳ್ಳಿಗೆ ಸೇರುವುದರಿಂದ ಕಾಮಗಾರಿ ಹಂತ ಹಂತವಾಗಿ ಮಾಡಲಾಗುತ್ತದೆ ಎಂದ ಅವರು, ಸಾರ್ವಜನಿಕರು ಮನೆ ಮನೆಗೆ ನೀರಿನ ಸಂಪರ್ಕ, ಯುಜಿಡಿ ಸಂಪರ್ಕ ಆದಷ್ಟು ಬೇಗ ತೆಗೆದುಕೊಂಡರೆ ರಸ್ತೆಗಳಿಗೆ ಡಾಂಬರು ಹಾಕುವ ಕೆಲಸ ಮಾಡಬಹುದು ಎಂದು ಹೇಳಿದರು.
ನಾಳೆ ಮಧ್ಯಾಹ್ನ ಬಿಡಬ್ಲ್ಯೂ ಎಸ್‍ಎಸ್‍ಬಿ, ಮೇಜರ್ ರಸ್ತೆ, ಜೆಸಿ ಹಾಗೂ ಸ್ಥಳೀಯರ ಸಭೆ ಕರೆದಿದ್ದು ಈ ಸಭೆಯಲ್ಲಿ ಕಾಮಗಾರಿ ವೇಗಕ್ಕೆ ಅತ್ಯಗತ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಯಾವುದೇ ಒಂದು ಕಾಮಗಾರಿ ನಡೆಯಬೇಕಾದರೆ ಸ್ಥಳೀಯರ ಸಹಕಾರ ಅಗತ್ಯ.ತಮ್ಮ ಸ್ವಂತ ಕೆಲಸವೆಂದು ತಿಳಿದು ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.
ಮೊದಲು ಬಿವಿಎಂಪಿ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು ನಂತರ ಖುದ್ದಾಗಿ ತಾವೇ ರಸ್ತೆಗಿಳಿದು ಸಮಸ್ಯೆ ಕಂಡರು.
ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ್, ಜಂಟಿ ಆಯುಕ್ತ ಜಗದೀಶ್, ಮುಖಂಡರಾದ ಸಿ.ವೆಂಕಟೇಶ್, ಜಯಂತಿನಗರ ಮುನಿಯಪ್ಪ, ಅಧಿಕಾರಿಗಳಾದ ರಂಗನಾಥ್, ವೆಂಕಟೇಶ್ ಮೂರ್ತಿ, ರಮೇಶ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ