ಬೆಂಗಳೂರು, ಆ. 4- ಅಕ್ರಮ ವರ್ಗಾವಣೆ ದಂಧೆಯಿಂದ ತಮಗೆ ಪುರಸೊತ್ತು ಸಿಕ್ಕಿಲ್ಲವೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಟ್ವಿಟ್ ಮಾಡಿದೆ.
ಏಕವ್ಯಕ್ತಿ ಸರ್ಕಾರದ ಮುಖ್ಯಮಂತ್ರಿ ಬಿಎಸ್ವೈ ಅವರೇ ಅಕ್ರಮ ವರ್ಗಾವಣೆ ದಂಧೆಯಿಂದ ಪುರಸೊತ್ತು ಸಿಕ್ಕಿಲ್ಲವೇ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಐದು ಜಿಲ್ಲೆಗಳು ಜಲಪ್ರಳಯದಲ್ಲಿ ಮುಳಗಿವೆ. ರೈತರು ಕಂಗಾಲಾಗಿದ್ದಾರೆ.ಜನ-ಜೀವನ ಅಸ್ತವ್ಯಸ್ತವಾಗಿದೆ.
ನಿಮ್ಮಂತೆಯೇ ಆಡಳಿತಯಂತ್ರವು ನಿಷ್ಕ್ರಿಯವಾಗಿದೆ. ಈ ದುರಂತಗಳಿಂದ ಜನತೆ ಪಾರಾಗುವುದು ಹೇಗೆ ಎಂದು ಪ್ರಶ್ನಿಸುವ ಮೂಲಕ ಕೆಪಿಸಿಸಿ ಅಕ್ರಮ ವರ್ಗಾವಣೆ ದಂಧೆ ಹಾಗೂ ಪ್ರಸ್ತುತ ರಾಜ್ಯದ ಕೆಲವು ಜಿಲ್ಲೆಗಳ ಜಲಪ್ರಳಯದ ವಿಷಯವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದೆ.