ಬ್ಯಾಂಕಾಕ್,ಆ.2-ಥೈಲ್ಯಾಂಡ್ ರಾಜಧಾನಿಯಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರ ಶೃಂಗಸಭೆ ಸಂದರ್ಭದಲ್ಲೇ ಅಹಿತಕರ ಘಟನೆಗಳು ನಡೆದಿವೆ.
ಅಮೆರಿಕ ವಿದೇಶಾಂಗ ಸಚಿವ ಮೈಕ್ ಬೊಂಪಿಯೊ ಭಾಗವಹಿಸಿದ್ದ ಪ್ರಾದೇಶಿಕ ಶೃಂಗಸಭೆಯೊಂದರ ಬಳಿ ಇಂದು ಬೆಳಗ್ಗೆ ಸಣ್ಣಪುಟ್ಟ ಬಾಂಬ್ಗಳು ಸ್ಫೋಟಗೊಂಡವು.
ಈ ದುರ್ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜಕೀಯ ಪ್ರೇರಿತ ಹಿಂಸಾಚಾರಗಳಿಂದ ಕುಖ್ಯಾತಿ ಪಡೆದಿರುವ ಥೈಲಾಂಡ್ನ ಬ್ಯಾಂಕಾಕ್ನಲ್ಲಿ ಆಸಿಯಾನ್ ಶೃಂಗಸಭೆ, ಪೂರ್ವ ಏಷಿಯಾ ದೇಶಗಳ ವಿದೇಶಾಂತ ಸಚಿವ 6ನೆ ಸಮಾವೇಶ ಸೇರಿದಂತೆ ಕೆಲವು ಅಂತಾರಾಷ್ಟ್ರೀಯ ಮಟ್ಟದ ಸಭೆ ಸಮಾರಂಭಗಳು ನಡೆಯುತ್ತಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾರತನ್ನು ಪ್ರತಿನಿಧಿಸಿದ್ದಾರೆ.
ಅಂತಾರಾಷ್ಟ್ರೀಯ ಗಣ್ಯರು ಮತ್ತು ವಿವಿಧ ದೇಶಗಳ ಸಚಿವರು ಭಾಗವಹಿಸಿರುವ ಸಂದರ್ಭದಲ್ಲೇ ಬಾಂಬ್ ಸ್ಫೋಟಗಳು ಸಂಭವಿಸಿರುವುದರಿಂದ ಬ್ಯಾಂಕಾಕ್ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ.