ನಾಳೆಯಿಂದ ಆರಂಭವಾಗಲಿದೆ ವಿಂಡೀಸ್ ಸರಣಿ :ಕೊಹ್ಲಿ ಸೈನ್ಯದ ಮುಂದೆ ಸಾಲು ಸಾಲು ಸವಾಲುಗಳು

ನಾಳೆಯಿಂದ ಕೆರೆಬಿಯನ್ನರ್ ನಾಡಲ್ಲಿ ವಿರಾಟ್ ನೇತೃತ್ವದ ಟೀಮ್ ಇಂಡಿಯಾ ವಿಂಡೀಸ್ ಪ್ರವಾಸವನ್ನ ಆರಂಭಿಸಲಿದೆ. ಮುಂಬರುವ ವಿಶ್ವ ಟಿ20 ಸರಣಿಯನ್ನ ದೃಷ್ಟಿಯಲಿಟ್ಟುಕೊಂಡು ಸಜ್ಜಾಗುತ್ತಿರುವ ಕೊಹ್ಲಿ ಸೈನ್ಯ ಹೀಗಿಂದಲೇ ಬಲಿಷ್ಠ ತಂಡವನ್ನ ಕಟ್ಟಲು ಪಣ ತೊಟ್ಟಿದೆ. ಆದರೆ ಕೆಲವೊಂದು ಬ್ಲೂ ಬಾಯ್ಸ್ ಕೆಲವೊಂದು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಹಾಗಾದ್ರೆ ಆ ಸವಾಲುಗಳೇನು ಅನ್ನೊದನ್ನ ತೋರಿಸ್ತೀವಿ ನೋಡಿ.

ಸವಾಲ್ ನಂ.1 : ಸ್ಥಾನ ಉಳಿಸಿಕೊಳ್ತಾರಾ ಡೆಲ್ಲಿ ಡ್ಯಾಶರ್ ಶಿಖರ್ ಧವನ್ ?
ವಿಶ್ವಕಪ್ ವೇಳೆ ಗಾಯಗೊಂಡು ಟೂರ್ನಿಯನ್ನ ಅರ್ಧದಲ್ಲೆ ಬಿಟ್ಟು ಹೋದ ಶಿಖರ್ ಧವನ್ ಇದೀಗ ವಿಂಡೀಸ್ ಸರಣಿ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

ವಿಶ್ವ ಕ್ರಿಕೆಟ್ನಲ್ಲಿ ಬೆಸ್ಟ್ ಓಪನರ್ ಅಂತಾನೆ ಗುರುತಿಸಿಕೊಂಡಿರುವ ಧವನ್ ಕೆಲವು ತಿಂಗಳಿನಿಂದ ಸಾಕಷ್ಟು ವೈಫಲ್ಯಗಳನ್ನ ಅನುಭವಿಸಿದ್ದಾರೆ. ಆದರೆ ಚುಟಕು ಫಾರ್ಮೆಟ್ ಟಿ20ಯಲ್ಲಿ ಒಳ್ಳೆಯ ರೆಕಾರ್ಡ್ನ್ನ ಕಾಪಾಡಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಮುಗಿದ ಐಪಿಎಲ್ನಲ್ಲಿ ನಾಲ್ಕನೆ ಅತಿ ಹೆಚ್ಚು ರನ್ ದಾಖಲಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಸದ್ಯ ತಂಡಕ್ಕೆ ವಾಪಸ್ ಮರಳಿರುವ ಧವನ್ ಓಪನರ್ರಾಗಿ ತಮ್ಮ ಸ್ಥಾನ ಉಳಿಸಿಕೊಳ್ತಾರಾ ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.

ಸವಾಲ್ ನಂ.2 :ಯಾವ ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡ್ತಾರೆ ಕ್ಯಾಪ್ಟನ್ ಕೊಹ್ಲಿ ?
ಒಳ್ಳೆಯ ಫಾರ್ಮ್ನಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಿಂದ ವಿಶ್ವದ ಮೈದಾನಗಳಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿ ರನ್ ಹೊಳೆಯನ್ನೆ ಹರಿಸಿದ್ದಾರೆ. ನಾಯಕನಾದ ನಂತರ ನಂ.3ಯಲ್ಲಿ ಬ್ಯಾಟಿಂಗ್ ಮಾಡಿಕೊಂಡು ಬಂದಿರುವ ಕೊಹ್ಲಿ ದಾಖಲೆ ದಾಖಲೆಗಳನ್ನ ಬರೆದಿದ್ದಾರೆ. ನಂ.3ಯಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರೋದ್ರಿಂದ ನಂತರ ಬರುವ ಬ್ಯಾಟ್ಸ್ಮನ್ಗಳ ಒತ್ತಡವನ್ನ ಕಡಿಮೆ ಮಾಡುತ್ತಾ ಬಂದಿದ್ದಾರೆ. ಆದರೆ ತಂಡಕ್ಕೆ ಶಾಪವಾಗಿರುವ ನಂ.4ನಲ್ಲಿ ಕೊಹ್ಲಿ ಆಡಿದ್ರೆ ತಂಡದ ಮಿಡ್ಲ್ ಆರ್ಡರ್ಗೆ ಆನೆ ಬಲ ಬರಲಿದೆ. ಜೊತೆಗೆ ನಂ.4 ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಾತಾಗುತ್ತದೆ. ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ವಿರಾಟ್ ಕೊಹ್ಲಿ ನಂ.4ನಲ್ಲಿ ಆಡೋದು ತಂಡಕ್ಕೆ ಒಳಿತಾಗಲಿದೆ. ಐಪಿಎಲ್ನಲ್ಲೂ ಕೂಡ ಕೊಹ್ಲಿ ನಂ.4ನಲ್ಲಿ ಆಡಲಿದ್ದಾರೆ.

 

 

 

 

 

 

 

 

 

 

 

 

 

 

 

ಸವಾಲ್ ನಂ.3 : ಬಲಿಷ್ಠವಾಗಬೇಕು ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ ಅಪ್
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋಲಲು ಕಾರಣವಾಗಿದ್ದು ತಂಡದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್. ಇದೀಗ ಯುವ ಬ್ಯಾಟ್ಸ್ಮನ್ಗಳ ದಂಡು ತಂಡಕ್ಕೆ ಆಗಮಿಸಿದೆ. ಕನ್ನಡಿಗ ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯರಂತ ಯುವ ಆಟಗಾರರು ಇದ್ದಾರೆ. ಈ ಯುವ ಆಟಗಾರರು ಮಿಡ್ಲ್ ಆರ್ಡರ್ ವಿಭಾಗದಲ್ಲಿ ತಂಡಕ್ಕೆ ತಡೆ ಗೋಡೆಯಂತೆ ನಿಲ್ಲಬೇಕಿದೆ.

ಸವಾಲ್ ನಂ.4: ಎರಡನೇ ಆಲ್ರೌಂಡರ್ ಯಾರು ?
ಟೀಮ್ ಇಂಡಿಯಾಗೆ ಇಬ್ಬರು ಆಲ್ರೌಂಡರ್ಗಳ ಅಗತ್ಯವಿದೆ. ವಿಶ್ವಕಪ್ ವೇಳೆ ತಂಡಕ್ಕೆ ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯ ಇದ್ರು. ಸದ್ಯ ವಿಜಯ್ ಶಂಕರ್ ಇಂಜುರಿ ಸಮಸ್ಯೆಗೆ ಗುರಿಯಾಗಿರೋದ್ರಿಂದ ಇವರ ಸ್ಥಾನದಲ್ಲಿ ಯುವ ಆಲ್ರೌಂಡರ್ ಕೃನಾಲ್ ಪಾಂಡ್ಯ ಆಡಲು ಸಜ್ಜಾಗಿದ್ದಾರೆ. ಟಿ20 ಹೇಳಿ ಮಾಡಿಸಿದ ಆಟಗಾರರಾಗಿರುವ ಕೃನಾಲ್ ಪಾಂಡ್ಯ ತಮ್ಮ ಹಾರ್ದಿಕ್ಗಿಂತ ಒಳ್ಳೆಯ ಎವರೇಜ್ ಹೊಂದಿರುವ ಕೃನಾಲ್ 140 ಪ್ಲಸ್ ಸ್ಟ್ರೈಕ್ ರೇಟ್ ಪಡೆದಿದ್ದಾರೆ.

ನಂ.5 :ರಿಸ್ಟ್ ಸ್ಪಿನ್ನರ್ಸ್ಗಳನ್ನೆ ನಂಬಿಕೊಂಡು ಇರ್ತಾರಾ ವಿರಾಟ್ ?
ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಕುಲ್ ಚಾ ಗ್ಯಾಂಗ್ ಮ್ಯಾಜಿಕ್ ಮಾಡಿದೆ. ಕುಲ್ದೀಪ್ ಮತ್ತು ಚಹಲ್ ಮಿಡ್ಲ್ ಓವರ್ನಲ್ಲಿ ಸೂಪರ್ ಸ್ಪೆಲ್ ಮಾಡಿ ತಂಡದ ಮ್ಯಾಚ್ ವಿನ್ನರ್ಸ್ಗಳಾಗಿ ಹೊರ ಹೊಮ್ಮಿದ್ದಾರೆ. ಇದೀಗ ಕ್ಯಾಪ್ಟನ್ ಕೊಹ್ಲಿ ಇವರಿಬ್ಬರಿಗೆ ಮತ್ತೆ ಮತ್ತೆ ಚಾನ್ಸ್ ಕೊಡ್ತಾರಾ ಅಥವಾ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅಥವಾ ಕನ್ನಡಿಗ ಶ್ರೇಯಸ್ ಗೋಪಾಲ್ಗೆ ಅವಕಾಶ ಕೊಡ್ತಾರಾ ಅನ್ನೊದನ್ನ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ವಿಶ್ವ ಟಿ20 ಟೂರ್ನಿಗೆ 15 ತಿಂಗಳು ಬಾಕಿ ಇದ್ದು ಕೊಹ್ಲಿ ಈ ಎಲ್ಲ ಸಮಸ್ಯಗಳನ್ನ ಬಗೆ ಹರಿಸಿದ್ರೆ ವಿಶ್ವ 20ಯನ್ನ ಮುಡಿಗೇರಿಸಿಕೊಳ್ಳದ್ರಲ್ಲಿ ಅನುಮಾನವೇ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ