ಡೂಮ್ಕಾ, ಆ.1– ಗ್ರಾಮಕ್ಕೆ ನುಗ್ಗಿ ಮನೆವೊಂದರಿಂದ ಕಳುವು ಮಾಡಿ ಪರಾರಿಯಾಗುತ್ತಿದ್ದ ಚೋರರನ್ನು ಹಿಡಿದು ಮನಸೋ ಇಚ್ಛೆ ಬಡಿದು ಕೊಂದಿರುವ ಘಟನೆ ಜಾರ್ಖಂಡ್‍ನ ಡೂಮ್ಕಾ ಜಿಲ್ಲೆಯ ಜೀಹುಡಿಯಾ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಅಪರಾಧ ಹಿನ್ನೆಲೆಯುಳ್ಳ ಬೋಲಾ ಹಜರಾ ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಆರೋಪಿ. ಈತನೊಂದಿಗೆ ಸಿಕ್ಕಿ ಬಿದ್ದ ಇತರ ಮೂವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಮನೆಯೊಂದಕ್ಕೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದು ಈ ನಾಲ್ವರು ಪರಾರಿಯಾಗುತ್ತಿದ್ದರು. ಗ್ರಾಮಸ್ಥರು ಇವರ ಬೆನ್ನಟ್ಟಿ ಹಿಡಿದು ಮನಸೋ ಇಚ್ಚೇ ಥಳಿಸಿದರು. ಬೋಲಾ ಹಜರಾ ಸ್ಥಳದಲ್ಲೇ ಮೃತಪಟ್ಟ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತ ಕಳ್ಳತನ, ಸುಲಿಗೆ ಮತ್ತು ದರೋಡೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ, ಬೋಲಾ ವಿರುದ್ಧ ಪಂಜಾಬ್‍ನಲ್ಲೂ ಕಳ್ಳತನ ಪ್ರಕರಣ ದಾಖಲಾಗಿತ್ತು.