ದೇಶದ ಇತಿಹಾಸದಲ್ಲೇ ಗರಿಷ್ಟ ಪ್ರಮಾಣದಲ್ಲಿ ಹರಿದುಬಂದ ಎಫ್‍ಡಿಐ

ನವದೆಹಲಿ, ಆ.1– ಕಳೆದ ವಿತ್ತೀಯ ವರ್ಷದಲ್ಲಿ ಭಾರತ ದೇಶದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ (ಎಫ್‍ಡಿಐ)ಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜನಾ ಇಲಾಖೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿದೇಶಿ ನೇರ ಹೂಡಿಕೆ ನೀತಿ, ಉದಾರೀಕರಣ ಮತ್ತು ಸುಧಾರಣೆಗಳ ಪರಿಣಾಮ 2018-19 ಹಣಕಾಸು ವರ್ಷದಲ್ಲಿ 64.37 ಶತಕೋಟಿ ಡಾಲರ್ ವಿದೇಶಿ ಹೂಡಿಕೆ ದೇಶಕ್ಕೆ ಹರಿದು ಬಂದಿದೆ ಎಂದು ಅಂಕಿ-ಅಂಶ ನೀಡಿದೆ.

ಈ ಹಿಂದಿನ ವಿತ್ತೀಯ ವರ್ಷದಲ್ಲಿ ಭಾರತ 60.97 ಶತಕೋಟಿ ಡಾಲರ್ ಹಣ ಭಾರತಕ್ಕೆ ಎಫ್‍ಡಿಐ ಮೂಲಕ ಹರಿದು ಬಂದಿತ್ತು. ಇದು ಈ ವರೆಗಿನ ಗರಿಷ್ಟ ಎಫ್‍ಡಿಐ ಹೂಡಿಕೆಯಾಗಿತ್ತು. ಆದರೆ 2018-19ರಲ್ಲಿ ಇದನ್ನೂ ಮೀರಿದ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ ಎಂದು ಹೇಳಿದೆ. ಅಂತೆಯೇ ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆ ಪ್ರಮಾಣ 286 ಶತಕೋಟಿ ಡಾಲರ್ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂತೆಯೇ ಕೇವಲ ವಿದೇಶಿ ನೇರ ಹೂಡಿಕೆ ಮಾತ್ರವಲ್ಲದೇ ಅದರ ಮೂಲಕ ಭಾರತಕ್ಕೆ ಉದ್ಯಮ ವಲಯದ ಅತ್ಯಾಧುನಿಕ ತಂತ್ರನಗಳೂ ಕೂಡ ಆಗಮಿಸಿದ್ದು, ಇನ್ನೂ ಸಾಕಷ್ಟು ವಿನೂತನ ತಂತ್ರನಗಳು ಭಾರತದಲ್ಲಿ ಆವಿಷ್ಕಾರಗೊಳ್ಳುತ್ತಿವೆ. ಆ ಮೂಲಕ ಭಾರತದ ಆರ್ಥಿಕತೆ ಅಭಿವೃದ್ಧಿಗೆ ವೇಗ ನೀಡಲಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ