ಚಿಕ್ಕಮಗಳೂರು, ಜು.31- ಕಾಫಿ ನಾಡಿನ ಯಶಸ್ವಿ ಉದ್ಯಮಿ ಸಿದ್ದಾರ್ಥ ಇನ್ನು ನೆನಪು ಮಾತ್ರ…
ಇಡೀ ಜಗತ್ತಿಗೆ ಕಾಫಿಯ ಘಮಲನ್ನು ಪಸರಿಸಿದ, ಅಪ್ಪಟ ಸ್ನೇಹಮಯಿ ವ್ಯಕ್ತಿತ್ವದ ಸಿದ್ದಾರ್ಥ ಅವರು, ದುರಂತ ಸಾವು ಕಂಡಿರುವುದು ನೋವಿನ ಸಂಗತಿ.
ತನ್ನ ಕನಸಿನ ಕೂಸಾದ “ಕಾಫಿ ಡೇ” ಉದ್ಯಮ ಮೂಲಕ ಯಶಸ್ಸು ಕಂಡು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಸಿದ್ದಾರ್ಥ ಅವರು, ತಮ್ಮ ಸ್ವಪರಿಶ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ವ್ಯಕ್ತಿ.
ಗಂಗಯ್ಯ ಹೆಗ್ಗಡೆ, ವಾಸಂತಿ ದಂಪತಿ ಪುತ್ರರಾದ ಸಿದ್ದಾರ್ಥ ಹೆಗ್ಗಡೆ ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ . 450 ವರ್ಷದ ಇತಿಹಾಸ ಇರುವ ಹೆಗ್ಗಡೆ ತಂದೆಯ ಮೂಲ ಮನೆ ಕಳಸ ಸಮೀಪದ ತನೂಡಿ. ತಾಯಿ ಮನೆ ಬೆಜ್ಜವಳ್ಳಿ.
ಕಾಫಿ ನಾಡಿನ ಕಣ್ಮಣಿಯಾದ ಸಿದ್ದಾರ್ಥ ಅವರು, ತಾವು ಕಂಡ ಕನಸನ್ನು ನನಸಾಗಿಸಿಕೊಂಡ ಓರ್ವ ಹಠವಾದಿ. ಸ್ವಾಭಿಮಾನದ ಬದುಕನ್ನು ತನ್ನದಾಗಿಸಿಕೊಂಡು ತಮ್ಮ ಪ್ರತಿಭೆ, ಪರಿಶ್ರಮದಿಂದ ಪ್ರವರ್ಧಮಾನಕ್ಕೆ ಬಂದ ಕಥೆಯೇ ರೋಚಕ….
ಸಿದ್ದಾರ್ಥ ಹೆಗ್ಡೆ ಒಬ್ಬ ಪ್ರಭಾವಿ ಉದ್ಯಮಿ..
ಬೆಂಗಳೂರಿನಲ್ಲಿ ಆರಂಭವಾದ ಸಿದ್ದಾರ್ಥ ಬ್ಯೂಸಿನಸ್ ಇಂದು ವಿಶ್ವದಲ್ಲಿ ಪ್ರಸಿದ್ಧಿ. ಹಲವು ರಾಷ್ಟ್ರಗಳಲ್ಲಿ 1500ಕ್ಕೂ ಹೆಚ್ಚು ಮಳಿಗೆ ಹೊಂದಿದೆ.
ಕಾಫಿ ಡೇ ಮಾಲೀಕ ಸಿದ್ದಾರ್ಥ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಒಬ್ಬರು. ಅಂದು ತಂದೆ ಕೊಟ್ಟ ಕೇವಲ 20 ಸಾವಿರ ರೂ ನಲ್ಲಿ ಸಿದ್ದಾರ್ಥ 22000 ಕೋಟಿ ಒಡೆಯರಾದರು.
ಚಿಕ್ಕಮಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1983-84ರಲ್ಲಿ ಮುಂಬೈಗೆ ತೆರಳಿದ ಸಿದ್ದಾರ್ಥ, ಜೆ.ಎಂ.ಫೈನಾನ್ಸಿಯಲ್ ಲಿಮಿಟೆಡ್‍ನಲ್ಲಿ ಉದ್ಯೋಗ ಕ್ಕೆ ಸೇರಿಕೊಂಡರು.
ನಂತರ ಮಹೇಂದ್ರ ಕಂಪನಿ ನೇತೃತ್ವದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪೋಟ್ಪೋಲಿಯೊ ಮ್ಯಾನೇಜ್ಮೆಂಟ್ ಮತ್ತು ಸೆಕ್ಯುರಿಟಿ ವಹಿವಾಟಿನ ಟ್ರೈನಿಯಾಗಿ ಕೆಲಸ ಮಾಡಿ 2 ವರ್ಷದ ನಂತರ ಸ್ವಂತ ಊರಿಗೆ ಅಗಮಿಸಿದರು. ತಂದೆ ಗಂಗಯ್ಯ ಹೆಗ್ಗಡೆ ಅವರಿಂದ ಸ್ವಂತ ಉದ್ಯೋಗ ಮಾಡಲು 20 ಸಾವಿರ ಹಣ ಪಡೆದು 24ನೇ ವಯಸ್ಸಿನಲ್ಲಿ ಸ್ಟಾಕ್ ಮಾರ್ಕೆಟ್ ಖರೀದಿಸಿದ ಕೀರ್ತಿ ಇವರದು.
ಶಿವನ್ ಸೆಕ್ಯುರಿಟಿ ಕಂಪೆನಿ ಅರಂಭ..
ಶಿವನ್ ಸೆಕ್ಯುರಿಟಿ ಈಗ “ವೆ ಟು ವೆಲ್ತ್” ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತೀ ಹೆಚ್ಚು ಲಾಭ ತಂದು ಕೊಟ್ಟ ಸಂಸ್ಥೆ ಇದಾಗಿದೆ.
ಎಸ್‍ಎಂಕೆ ಪುತ್ರಿ ಮಾಳವಿಕ ವಿವಾಹ..
ಚಿಕ್ಕಮಗಳೂರು ಹಾಸನದಲ್ಲಿ ನಷ್ಟದಲ್ಲಿದ್ದ ಕಾಫಿ ತೋಟ ಖರೀದಿಸಿದ್ದ ಸಿದ್ದಾರ್ಥ ಎಬಿಸಿ ಕಂಪೆನಿ ಹೆಸರಿನಲ್ಲಿ 12 ಸಾವಿರ ಎಕರೆ ಕಾಫಿ ತೋಟ ಮಾಡಿದ್ದಾರೆ.
ಕೆಫೆ ಕಾಫಿ ಡೇಗೆ ಬೇಕಾದ ಕಾಫಿ ಬೀಜ ಸ್ವಂತ ತೋಟದಿಂದಲೇ ಕಳುಹಿಸಲಾಗುತ್ತಿತ್ತು. ಅಂಬರವ್ಯಾಲಿ ಶಾಲೆ, ಸೆರಾಯಿ ರೇಸಾರ್ಟ್ ಪ್ರಾರಂಭಿಸಿ ಯಶಸ್ವಿ ಹೋಟೆಲ್ ಉದ್ಯಮಿಯಾದರು.
ಬದುಕು ಬದಲಾಯಿಸಿದ ಕಾಫಿ ಉದ್ಯಮ..
ಶೇರು ವ್ಯವಹಾರದಲ್ಲಿ 15ವರ್ಷ ಬ್ಯೂಸಿನಸ್ ನಡೆಸಿದ್ದ ಸಿದ್ದಾರ್ಥ ಅವರು, ನಂತರ ಹುಟ್ಟೂರಿನಲ್ಲಿ ಕಾಫಿ ಉದ್ಯಮ ಆರಂಭಿಸಿದರು. ಚಿಕ್ಕಮಗಳೂರು ನಲ್ಲಿ 1993 ರಲ್ಲಿ ಎಬಿಸಿ ಕಂಪೆನಿಯನ್ನು ಸ್ಥಾಪಿಸಿ ಕಾಫಿ ಉದ್ಯಮದಲ್ಲಿ ಭಾಗಿಯಾಗಿ ಕ್ರಾಂತಿಗೆ ಕಾರಣರಾದರು.
ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು …
ಹಾಸನ ಜಿಲ್ಲೆಯಲ್ಲಿ ಆನಾರೋಗ್ಯ ಕಂಪೆನಿಯನ್ನ ಖರೀದಿ ಮಾಡಿದ್ದು, ಇದೀಗ 25 ಸಾವಿರ ಟನ್ ಕಾಫಿ ಉತ್ಪಾದನೆ ಸಾಮಥ್ರ್ಯ ಹೊಂದಿರುವ ಕಂಪೆನಿಯಾಗಿದೆ. ಕಾಫಿ ಡೇ ಕಾಫಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲೂ ಉತ್ತಮ ಬೇಡಿಕೆ ಇದೆ.
ಹಸಿರು ಕಾಫಿಯನ್ನು ರಫ್ತು ಮಾಡುವ ಅತೀ ದೊಡ್ಡ ರಫ್ತು ದಾರ ಕಂಪೆನಿ ಹಾಗೂ ಏಷ್ಯದಲ್ಲೇ ಎರಡನೇ ದೊಡ್ಡ ಕಂಪೆನಿಯಾಗಿ ಎಬಿಸಿ ಹೊರಹೊಮ್ಮಿದೆ.
ಇದಕ್ಕೆ ಸಿದ್ದಾರ್ಥ ಅವರ ದೂರದೃಷ್ಟಿತ್ವ ಹಾಗೂ ಅಪರಿಮಿತ ಪರಿಶ್ರಮವೇ ಕಾರಣ. 1996 ಬೆಂಗಳೂರಿನ ಎಂ.ಜಿ ರಸ್ತೆ ಯಲ್ಲಿ ಕಾಫಿ ಡೇ ಕೆಫೆ ಆರಂಭಿಸಿದ ಅವರು, ನಂತರ ದೇಶ, ವಿದೇಶದಲ್ಲೂ ಔಟ್ ಲೇಟ್ ಅರಂಭಿಸಿದರು.
ಐಟಿ ಕಂಪೆನಿ, ವಿಮಾನ ನಿಲ್ದಾಣ ಸೇರಿದಂತೆ ವಿಶ್ವದಲ್ಲಿ ಸುಮಾರು 1550 ಕಾಫಿ ಡೇ ಔಟ್ ಲೇಟ್‍ಗಳನ್ನು ಪ್ರಾರಂಭಿಸಿದ ಕೀರ್ತಿ ಸಿದ್ದಾರ್ಥ ಅವರಿಗೆ ಸಲ್ಲುತ್ತದೆ.
ವಾರ್ಷಿಕ ವಾರು 40 ಸಾವಿರದಿಂದ 50 ಸಾವಿರ ಪ್ರವಾಸಿಗರು ಬಂದು ಔಟ್ ಲೇಟ್‍ನಲ್ಲಿ ಕಾಫಿ ಸವಿಯುತ್ತಾರೆ ಎಂದರೆ ಕಾಫಿ ಡೇ ಖ್ಯಾತಿಯನ್ನು ನೀವೇ ಊಹಿಸಿ.
ಐಟಿ ಕಂಪನಿಗಳಲ್ಲಿ ಶೇರ್…
2000 ರಲ್ಲಿ ಐಟಿಯಲ್ಲಿ ಹೂಡಿಕೆ ಮಾಡುವವರಿಗೆ ಮಾರ್ಗದರ್ಶನಕ್ಕಾಗಿ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಆರಂಭಿಸಿದ ಸಿದ್ದಾರ್ಥ ಅವರು, ಜಿಟಿವಿ , ಮೈಂಡ್ ಟ್ರೀ ಲಿಕ್ವಿಡ್ ಕ್ರಿಸ್ಟಲ್, ವೇ2ವೆಲ್ತ್ ಮತ್ತು ಇಟ್ಟಿಯಂ ಕಂಪನಿಯಲ್ಲಿ ಬೋರ್ಡ್ ಶೀಟ್ ಹೊಂದಿದ್ದಾರೆ.
ಪೀಠೋಪಕರಣ ತಯಾರಿಕೆ ಕಂಪೆನಿ ಅರಂಭ..
ಕಾಫಿ ಉದ್ಯಮ ದ ಜೊತೆ ಚಿಕ್ಕಮಗಳೂರು ನಲ್ಲಿ ಕತ್ತಲೆಕಾಡು ಎಸ್ಟೇಟ್‍ನಲ್ಲಿ ಪೀಠೋಪಕರಣ ಕಂಪೆನಿ ತೆರೆಯಲು ಪ್ಲಾನ್ ಮಾಡಿದ್ದರು.
ಭಾರತದ ಕಾಫಿ ತೋಟದಲ್ಲಿ ಬೆಲೆಬಾಳುವ ಮರಗಳನ್ನು ತಂದು ಪೀಠೋಪಕರಣ ತಯಾರಿಸಲು ಮುಂದಾಗಿದ್ದರು.ಗಯಾನದಲ್ಲಿ ಮರಗಳನ್ನ ತರಲು ಯೋಜನೆ ರೂಪಿಸಿದರು.
ದಕ್ಷಿಣ ಅಮೆರಿಕಾದ ಗಯಾದಲ್ಲಿ ಸುಮಾರು 30 ವರ್ಷ ಅವಧಿಗೆ 1.85 ದಶಲಕ್ಷ ಎಕ್ಟೆರ್ ಅಮೆಜೋನಿಯನ್ ಅರಣ್ಯದಲ್ಲಿ ಗುತ್ತಿಗೆ ಆದಾರದಲ್ಲಿ ಭೂಮಿ ಪಡೆದಿದ್ದರು. ಹೀಗೆ ಹತ್ತಾರು ಕನಸುಗಳನ್ನು ಹೊತ್ತು ಹಲವು ಸಾಹಸಗಳಿಗೆ ಸಿದ್ದಾರ್ಥ ಕೈ ಹಾಕಿದ್ದರು.
50 ಸಾವಿರ ಮಂದಿಗೆ ಉದ್ಯೋಗ..
ಕಳೆದ ಮೂರು ದಶಕದಿಂದ ಪ್ರತಿಷ್ಟಿತ ಉದ್ಯಮವಾಗಿದ್ದ ಕಾಫಿ ಡೇ, ಗ್ಲೋಬಲï ಟೆಕ್ನಾಲಜಿ ವೆಂಚರ್ಸ್ ಲಿಮಿಟೆಡ್ ಮೂಲಕ 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಕಾಫಿ ಡೇ ಸಂಸ್ಥೆ ಮೂಲಕ ಜಗತ್ತಿನಲ್ಲಿ 30 ಸಾವಿರ ಮಂದಿ ಉದ್ಯೋಗ, ಐಟಿ ಕಂಪೆನಿ ಮೂಲಕ 20 ಸಾವಿರ ಮಂದಿಗೆ ಉದ್ಯೋಗ ನೀಡಿ ಅನ್ನದಾತರೆಸಿದ್ದರು.
ಫೋರ್ಬ್ಸ್ ಪಟ್ಟಿ ಸೇರಿದ ಸಿದ್ದಾರ್ಥ..
ಕೆಫೆ ಕಾಫಿ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸಿದ್ದಾರ್ಥ ಅವರು ಇಂದು ದುರಂತ ಸಾವನ್ನಪ್ಪಿರುವುದು ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.