ನವದೆಹಲಿ, ಜು. 29– ಉತ್ತರಪ್ರದೇಶದ ರಾಯಬರೇಲಿಯಲ್ಲಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ಇನ್ನಿಬ್ಬರು ಮೃತಪಟ್ಟ ಘಟನೆ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು.
ಇದು ಅಪಘಾತವಲ್ಲ, ಸಂತ್ರಸ್ತೆಯನ್ನು ಕೊಲ್ಲಲು ನಡೆದ ಪಿತೂರಿ ಎಂದು ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸದಸ್ಯರು ಆರೋಪಿಸಿ ಸದನದಲ್ಲಿ ಧರಣಿ ನಡೆಸಿದರು.
ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು. ಈ ವಿಷಯವಾಗಿ ಸದನದಲ್ಲಿ ಗದ್ದಲ, ಕೋಲಾಹಲ ಮುಂದುವರೆದ ಕಾರಣ ಸಭಾಪತಿ ಎಂ.ವೆಂಕಯ್ಯನಾಯ್ಡು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಲಕ್ನೋ ವರದಿ: ಉನ್ನಾವೋ ಸಂತ್ರಸ್ತ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸಿದ್ಧವಿರುವುದಾಗಿ ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತೆಯನ್ನು ನೋಡಿಕೊಳ್ಳುತ್ತಿರುವ ತಾಯಿ. ಇದು ಅಪಘಾತವಲ್ಲ ನನ್ನ ಮಗಳನ್ನು ಕೊಲ್ಲಲು ನಡೆದ ಒಳಸಂಚು ಈ ಕೃತ್ಯದಲ್ಲಿ ವಕೀಲೆ, ಸಾಕ್ಷಿದಾರರು ಮೃತಪಟ್ಟಿದ್ದಾರೆ. ಇದು ಅಪಘಾತವಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.