ಗ್ವಾಂಗ್ಜು, ಜು. 29– ಒಲಿಂಪಿಕ್ಸ್ ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಅಥ್ಲೀಟ್ಸ್ಗಳು ಗರಿಗೆದರಿದ್ದು ಪದಕ ಬೇಟೆಯಾಡಲೂ ಸಜ್ಜಾಗಿ ನಿಂತಿದ್ದಾರೆ. ಅದೇ ರೀತಿ ಈಜಿನಲ್ಲೂ ಕೂಡ ಪದಕಗಳನ್ನು ಸೂರೆಗೊಳ್ಳಲು ಸ್ವಿಮ್ಮರ್ಗಳು ಕಾತರದಿಂದಿದ್ದಾರೆ.
ಮತ್ಸವೀರನೆಂದೇ ಬಿಂಬಿಸಿಕೊಂಡಿದ್ದ ಮೈಕಲ್ ಪಿಲಿಪ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡರೆ ಪದಕಗಳನ್ನು ಸೂರೆಗೊಳ್ಳುವುದು ಖಚಿತ ಎಂಬ ಮಾತು ಗದ್ಗದಿತವಾಗಿತ್ತು. ಆದರೆ ಈಗ ನಡೆಯುತ್ತಿರುವ ವಿಶ್ವ ಸಿಮ್ಮಿಂಗ್ ಚಾಂಪಿಯನ್ಸ್ಶಿಪ್ನಲ್ಲಿ ಅಮೆರಿಕಾದ ಕೆಲೇಬ್ ಡ್ರೆಸೆಲ್ ಎಂಬ ಮತ್ಸವೀರನ ಉಗಮವಾಗಿದೆ.
2017ರಲ್ಲಿ ನಡೆದ ಸ್ವಿಮ್ಮಿಂಗ್ ಕ್ರೀಡಾಕೂಟದಲ್ಲೇ ಮೈಕಲ್ ಪಿಲಿಪ್ಗೆ ಸ್ಪರ್ದೆಯೊಡ್ಡಿ ಭವಿಷ್ಯ ಪಿಲಿಪ್ ಎಂದೇ ಬಿಂಬಿಸಿಕೊಂಡಿದ್ದ ಕೆಲೇಬ್ ಡ್ರೆಸೆಲ್ ಈಗ ಮೈಕಲ್ನ ದಾಖಲೆಯನ್ನು ಮುರಿಯುವ ಮೂಲಕ ವಿಶ್ವ ಸ್ವಿಮ್ಮಿಂಗ್ನಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ್ದಾನೆ.
ಪ್ರಸ್ತುತ ನಡೆಯುತ್ತಿರುವ ವಿಶ್ವ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ನ 100 ಮೀಟರ್ ಬಟರ್ ಪ್ಲೆ ವಿಭಾಗದಲ್ಲಿ ಮೈಕಲ್ ಪಿಲಿಪ್ಸ್ ನಿರ್ಮಿಸಿದ 10 ವರ್ಷದ ದಾಖಲೆಯನ್ನು ಡ್ರೆಸೆಲ್ ಮುರಿದು ಹಾಕಿರುವುದೇ ಅಲ್ಲದೇ ಒಂದೇ ಋತುವಿನಲ್ಲಿ 7 ಪದಕಗಳನ್ನು ಗೆದ್ದಿದ್ದ ಮೈಕಲ್ ದಾಖಲೆಯನ್ನು ಡ್ರೆಸೆಲ್ 8 ಪದಕಗಳನ್ನು ಗೆಲ್ಲುವ ಮೂಲಕ ಮುರಿದು ಹಾಕಿದ್ದಾನೆ.
ಡ್ರೆಸೆಲ್ ವಿಶ್ವ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ನಲ್ಲಿ 6 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ತಮ್ಮ ಕೊರಳಿಗೆ ಹಾಕಿಕೊಳ್ಳುವ ಮೂಲಕ 2007 ಹಾಗೂ 2011ರಲ್ಲಿ ನಡೆದ ಚಾಂಪಿಯನ್ಸ್ಶಿಪ್ನಲ್ಲಿ ಮೈಕಲ್ ಪಿಲಿಪ್ಸ್ 7 ಪದಕಗಳನ್ನು ಗೆದ್ದ ದಾಖಲೆಯನ್ನು ಡ್ರೆಸೆಲ್ ಅಳಿಸಿಹಾಕಿದ್ದಾನೆ.
ಡ್ರೆಸೆಲ್ 50 ಮೀ, 100 ಮೀ ಪ್ರಿ, 50 ಮತ್ತು 100 ಮೀಟರ್ ಪ್ಲೆ, ್ಡ4100 ಮಿಕ್ಸ್ಡ್ ಫ್ರಿ ರಿಲೇಯಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಂಡರೆ, ಪುರುಷರ ಮಿಲ್ಡೆ ರಿಲೇ ಹಾಗೂ ್ಡ4100 ಮಿಕ್ಸ್ಡ್ನಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೋಕಿಯೋದಲ್ಲಿ 2020ರಲ್ಲಿ ಡ್ರೆಸೆಲ್ ಸ್ವಿಮಿಂಗ್ ವಿಭಾಗದಲ್ಲಿ ಮತ್ತಷ್ಟು ದಾಖಲೆಯನ್ನು ಬರೆಯಲು ಕಾತರದಿಂದಿದ್ದಾರೆ.
ದಾಖಲೆ ಬರೆದ ಆಡಂ ಪೀಟಿ
ವಿಶ್ವ ಸ್ವಮಿಂಗ್ ಚಾಂಪಿಯನ್ಶಿಪ್ನ 100 ಮೀಟರ್ ಬ್ರೆಸ್ಟ್ ಸ್ಟೋಕ್ ನಲ್ಲಿ ಬ್ರಿಟನ್ನ ಆ್ಯಡಂ ಪೀಟಿ 57 ಸೆಕೆಂಡ್ಗಳಲ್ಲೇ ಗುರಿ ಮುಟ್ಟುವ ಮೂಲಕ ದಾಖಲೆ ಬರೆದು ಸ್ವರ್ಣ ಪದಕವನ್ನು ಗೆದ್ದುಕೊಂಡಿದ್ದಾರೆ.
ನಿನ್ನೆ ನಡೆದ ಅಂತಿಮ ದಿನದ ಸ್ಪರ್ಧೆಯಲ್ಲೂ ್ಡ4100 ಮಿಡ್ಲೆ ವಿಭಾಗದಲ್ಲಿ ಪಾಲ್ಗೊಂಡ ಪೀಟಿ ಸ್ವರ್ಣ ಪದಕವನ್ನು ಗೆದ್ದುಕೊಂಡಿದ್ದಾರೆ.
ಸ್ವಿಮ್ಮಿಂಗ್ ವಿಭಾಗದಲ್ಲಿ ಯುವಕರು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸಕರ ಸಂಗತಿ. ಅವರ ಪೈಪೊಟಿಯ ನಡುವೆಯೂ ಮುಂಬರುವ ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸುತ್ತೇನೆ ಎಂದು ಸುದ್ದಿಗಾರರಿಗೆ ಪೀಟಿ ತಿಳಿಸಿದ್ದಾರೆ.