ಭಾರತದ ಬಾಕ್ಸಿಂಗ್ ಪಟುಗಳ ಸಾಧನೆಯ ಬಗ್ಗೆ ಸದನದಲ್ಲಿ ಗುಣಗಾನ

ನವದೆಹಲಿ, ಜು. 29– ರಾಜ್ಯಸಭೆಯಲ್ಲಿಂದು ಕಲಾಪದ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರ ಮುಂದೆ ಇದ್ದ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.

ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ ಮಾಜಿ ಸಚಿವ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಎಸ್.ಜೈಪಾಲ್ ರೆಡ್ಡಿ ಅವರ ನಿಧನಕ್ಕೆ ಸದನ ಸಂತಾಪ ವ್ಯಕ್ತಪಡಿಸಿತು.

ಇಂಡೋನೆಷಿಯಾದಲ್ಲಿ ಭಾರತದ ಬಾಕ್ಸಿಂಗ್ ಪಟುಗಳ ಸಾಧನೆಯ ಬಗ್ಗೆ ಸದನದಲ್ಲಿ ಗುಣಗಾನ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಪಕ್ಷದವರಿದ್ದ ಆಸನಗಳ ನಾಲ್ಕನೆ ಸಾಲಿನಲ್ಲಿ ಬಿಜೆಪಿ ಸದಸ್ಯ ಕೆ.ಜೆ.ಆಲ್ಫಾನ್‍ಸೋ ಅವರ ಮುಂದಿನ ವೋಟಿಂಗ್ ಕಮ್ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡಿತು. ಇದರಿಂದಾಗಿ ಆ ಸಾಲಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಆಲ್ಫಾನ್‍ಸೋ ಅವರ ಪಕ್ಕದಲ್ಲಿ ಬಿಜೆಪಿ ಸದಸ್ಯ ಪುರುಷೋತ್ತಮ್ ಖೋಡಾಬಾಯಿ ರೂಪಾಲಿ ಅವರು ಹೊಗೆಗೆ ಹೆದರಿ ಪಕ್ಕಕ್ಕೆ ಸರಿದರು.

ಮೈಕ್‍ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಭಾಪತಿ ವೆಂಕಯ್ಯನಾಯ್ಡು ಇದನ್ನು ಸರಿಪಡಿಸುವಂತೆ ರಾಜ್ಯಸಭೆ ಸಿಬ್ಬಂದಿ ಸೂಚನೆ ನೀಡಿ, ಕಲಾಪವನ್ನು 15 ನಿಮಿಷ ಮುಂದೂಡಿದರು.

ಶಾರ್ಟ್ ಸಕ್ರ್ಯೂಟ್‍ನಿಂದ ಮೈಕ್‍ನಲ್ಲಿ ಕಿಡಿ ಕಾಣಿಸಿಕೊಂಡು ಹೊಗೆಗೆ ಕಾರಣ ಎಂಬುದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ