ಬೆಂಗಳೂರು,ಜು.27- ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ತೀವ್ರಗೊಂಡಿದ್ದು, 33 ಸ್ಥಾನಕ್ಕೆ 60 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಬಿಜೆಪಿ ಸೇರಲಿರುವ ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಪಕ್ಷದಲ್ಲಿ ಅಸಮಾಧಾನಿತ ಶಾಸಕರನ್ನು ಸಂತೈಸುವುದು ಬಿಜೆಪಿ ನಾಯಕರಿಗೆ ಹಾಗೂ ಸಿಎಂ ಯಡಿಯೂರಪ್ಪಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ಹಿರಿಯ ಶಾಸಕರಿಂದ ಹಿಡಿದು ಮೊದಲ ಬಾರಿ ಗೆದ್ದ ಶಾಸಕರೂ ಸಚಿವಗಿರಿಗಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದಲೇ 12 ಜನ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾದವರು ಹಾಗೂ ಮಂತ್ರಿ ಪದವಿ ಸಿಗದೇ ವಂಚಿತರಾದವರು, ಪಕ್ಷಕ್ಕೆ ಸೇರಿದ ಹೊಸ ಮುಖಂಡರು ಸಚಿವ ಸ್ಥಾನಕ್ಕೆ ತಮ್ಮ ತಮ್ಮ ಗಾಡ್ ಫಾದರ್ ನಾಯಕರ ಮೂಲಕ ಒತ್ತಡ ಹಾಕುತ್ತಿದ್ದಾರೆ.
ಒಂದೊಂದು ಜಿಲ್ಲೆಯಿಂದ ಮೂರರಿಂದ ಐದು ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಬಳಿ ಲಾಬಿ ಮಾಡುತ್ತಿದ್ದಾರೆ.
ಬಿಜೆಪಿ, ರಾಜ್ಯದಲ್ಲಿ 105 ಶಾಸಕರನ್ನು ಹೊಂದಿದ್ದು. ಶೇಕಡಾ 50 ಕ್ಕಿಂತಲೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಯಾರು ಸಚಿವರಾಗಬೇಕೆನ್ನುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಚರ್ಚಿಸಿ ಬಿಜೆಪಿ ಹೈಕಮಾಂಡ್ ಅವರೇ ನಿರ್ಧಾರ ಮಾಡುವುದರಿಂದ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡು ಭಿನ್ನಮತೀಯ ಚಟುವಟಿಕೆ ನಡೆಸಿದರೆ ಅಂಥವರ ವಿರುದ್ದ ಶಿಸ್ತುಕ್ರಮ ತಗೆದುಕೊಳ್ಳುವ ಸಾಧ್ಯತೆಯ ಸಂದೇಶವನ್ನೂ ಪಕ್ಷ ಈಗಾಗಲೇ ಆಕಾಂಕ್ಷಿಗಳಿಗೆ ನೀಡಿದೆ.
ಇದು ಪಕ್ಷದ ಶಾಸಕರ ಕಥೆಯಾದರೆ ಭವಿಷ್ಯದಲ್ಲಿ ಬಿಜೆಪಿ ಸೇರಲಿರುವ ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಪಕ್ಷದಲ್ಲಿ ಅಸಮಾಧಾನಿತ ಶಾಸಕರನ್ನು ಸಂತೈಸುವುದು ಬಿಜೆಪಿ ನಾಯಕರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೊಡ್ಡ ಸವಾಲಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳ ವಿವರ:
ಜಗದೀಶ್ ಶೆಟ್ಟರ್
ವಿಶ್ವೇಶ್ವರ ಹೆಗಡೆ ಕಾಗೇರಿ
ಕೆ ಎಸ್ ಈಶ್ವರಪ್ಪ
ಶಶಿಕಾಂತ ಜೊಲ್ಲೆ
ಆರ್ ಅಶೋಕ್
ಪಿ ರಾಜೀವ್
ಕೆ.ಜಿ ಬೋಪಯ್ಯ
ಅಭಯ್ ಪಾಟೀಲ್
ಅಪ್ಪಚ್ಚು ರಂಜನ್
ಮುರುಗೇಶ್ ನಿರಾಣಿ
ಸುರೇಶ್ ಕುಮಾರ್
ಬಸನಗೌಡ ಪಾಟೀಲ್ ಯತ್ನಾಳ್
ಅರವಿಂದ ಲಿಂಬಾವಳಿ
ನರಸಿಂಹ ನಾಯಕ್
ಬಸವರಾಜ ಬೊಮ್ಮಾಯಿ
ಕೋಟಾ ಶ್ರೀನಿವಾಸ ಪೂಜಾರಿ
ಸಿ.ಎಂ ಉದಾಸಿ
ಆಯನೂರು ಮಂಜುನಾಥ್
ಉಮೇಶ್ ಕತ್ತಿ
ರುದ್ರೇಗೌಡ
ಬಾಲಚಂದ್ರ ಜಾರಕಿಹೊಳೆ
ರಘುನಾಥ್ ರಾವ್ ಮಲ್ಕಾಪುರೆ
ವಿ.ಸೋಮಣ್ಣ
ವೈ. ಎ. ನಾರಾಯಣ ಸ್ವಾಮಿ
ರಾಮದಾಸ್
ಗೂಳಿಹಟ್ಟಿ ಶೇಖರ್
ಗೋವಿಂದ್ ಕಾರಜೋಳ್
ಸುಬಾಶ್ ಗುತ್ತೇದಾರ್
ಶ್ರೀ ರಾಮುಲು
ಶಿವನಗೌಡ ನಾಯಕ್
ಕರುಣಾಕರ ರೆಡ್ಡಿ
ಕಳಕಪ್ಪ ಬಂಡಿ
ಸೋಮಶೇಖರ್ ರೆಡ್ಡಿ
ಸಿ.ಸಿ ಪಾಟೀಲ್
ಜಿ.ಹೆಚ್ ತಿಪ್ಪಾರೆಡ್ಡಿ
ಅರವಿಂದ ಬೆಲ್ಲದ
ಚಂದ್ರಪ್ಪ
ನೆಹರು ಓಲೇಕಾರ್
ಜೆ.ಸಿ ಮಾಧುಸ್ವಾಮಿ
ಎನ್ ವೈ ಗೋಪಾಲಕೃಷ್ಣ
ಬಿ.ಸಿ ನಾಗೇಶ್
ಎಸ್ ಎ ರವೀಂದ್ರನಾಥ
ಆರ್ ಪೂರ್ಣಿಮಾ
ರೇಣುಕಾಚಾರ್ಯ
ಎಸ್.ಆರ್ ವಿಶ್ವನಾಥ್
ಮಾಡಾಳ್ ವಿರುಪಾಕ್ಷಪ್ಪ
ಡಾ.ಅಶ್ವಥ್ ನಾರಾಯಣ
ಕುಮಾರ ಬಂಗಾರಪ್ಪ
ರವಿ ಸುಬ್ರಮಣ್ಯ
ಹರತಾಳ್ ಹಾಲಪ್ಪ
ಅರಗ ಜ್ಞಾನೇಂದ್ರ
ಸಿ.ಟಿ ರವಿ
ಅಂಗಾರ. ಎಸ್‍ಹಾಲಾಡಿ
ಶ್ರೀನಿವಾಸ ಶೆಟ್ಟಿ
ಎಂ ಪಿ ಕುಮಾರಸ್ವಾಮಿ
ಕೆ.ರಘುಪತಿ ಭಟ್ಟ
ಪ್ರಭು ಚೌಹಾಣ್
ವಿ. ಸುನೀಲ್ ಕುಮಾರ್
ವಿ ಚರಂತಿಮಠ್
ಸತೀಶ್ ರೆಡ್ಡಿ
ಬಿ.ಹರ್ಷವರ್ಧನ್
ಎಂ.ಕೃಷ್ಣಪ್ಪ
ಎಸ್.ರಘು