ಬಹುಮತವಿಲ್ಲದ ಬಿಎಸ್​ವೈಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವುದು ಅಸಂವಿಧಾನಿಕ; ಸಿದ್ದರಾಮಯ್ಯ

ಬೆಂಗಳೂರು: ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ರಮೇಶ್ಕುಮಾರ್ ಇನ್ನುಳಿದ 13 ಅತೃಪ್ತ ಶಾಸಕರ ರಾಜೀನಾಮೆ ಕುರಿತು ನಿರ್ಣಯ ಕೈಗೊಂಡಿಲ್ಲ. ಇಂತಹ ಸ್ಥಿತಿಯಲ್ಲಿ ಬಹುಮತವಿಲ್ಲದೇ ಬಿಎಸ್ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬಿಎಸ್ವೈ ಪ್ರಮಾಣವಚನಕ್ಕೆ ಕಾಂಗ್ರೆಸ್ಆಕ್ಷೇಪ ವ್ಯಕ್ತಪಡಿಸಿದೆ.

ಸದನದಲ್ಲಿ ಎಚ್​ ಡಿ ಕುಮಾರಸ್ವಾಮಿ ವಿಶ್ವಾಸ ಮಂಡನೆಯಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಬಿಎಸ್​ ಯಡಿಯೂರಪ್ಪ ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರದ ಕ್ಷಿಪ್ರ ಬೆಳವಣಿಗೆಯಲ್ಲಿ ಇಂದು ಸಂಜೆ  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.

ಆದರೆ ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್​, ಬಹುಮತವಿಲ್ಲದೇ ಹೇಗೆ ಪ್ರಮಾಣವಚನ ಸ್ವೀಕರಿಸಲು ಸಾಧ್ಯ ಎಂದು ಕೇಳಿದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಿಜೆಪಿಗೆ ಕೇವಲ 105 ಶಾಸಕರ ಬೆಂಬಲವಿದೆ. ಈ ಸಂಖ್ಯಾಬಲದಿಂದ ಬಹುಮತ ಸಾಬೀತು ಅಸಾಧ್ಯ. ಸಂವಿಧಾನಾತ್ಮಕವಾಗಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ. ಬಿಜೆಪಿ ಸಾಂವಿಧಾನಿಕ ಮೌಲ್ಯಗಳನ್ನು ನಂಬುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ, ಎಂದು ಟೀಕಿಸಿದ್ದಾರೆ.

ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ಮಾಡಿದ ಮನವಿ ಹಿನ್ನೆಲೆ ಮೂವರು ಶಾಸಕರನ್ನು ಅನರ್ಹ ಗೊಳಿಸಲಾಗಿದೆ. ಇನ್ನು 13 ಶಾಸಕರು ಸೇರಿದಂತೆ ಅನಾರೋಗ್ಯಕ್ಕೆ ಒಳಗಾಗಿದ್ದ ಶ್ರೀಮಂತ ಪಾಟೀಲ್​ ಪ್ರಕರಣದ ವಿಚಾರದಲ್ಲಿ ಸ್ಪೀಕರ್​ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದ್ಯ ಮೂವರು ಶಾಸಕರ ಅನರ್ಹತೆ ಬಳಿಕ ಸದನದ ಸಂಖ್ಯೆ 224ರಿಂದ 221ಕ್ಕೆ ಇಳಿದಿದೆ. ಇದರ ಅನ್ವಯ ಸರ್ಕಾರ ರಚಿಸಲು ಬಿಜೆಪಿ 112 ಬಹುಮತ ಸಿಗಬೇಕು. ಆದರೆ, ಈ ಬಹುಮತ ಬಿಜೆಪಿಗೆ ಇಲ್ಲ.

ಇಂತಹ ಸ್ಥಿತಿಯಲ್ಲಿ ಬಿಜೆಪಿ ತರಾತುರಿಯಲ್ಲಿ ಪ್ರಮಾಣ ವಚನಕ್ಕೆ ಮುಂದಾಗಿರುವುದು. ಇದನ್ನು ರಾಜ್ಯಪಾಲರು ಒಪ್ಪಿರುವುದು, ಪ್ರಜಾಪ್ರಭುತ್ವಕ್ಕೆ ಮಾರಕ. ಬಹುಮತವಿಲ್ಲದೆ, ಪ್ರಮಾಣವಚನ ಸ್ವೀಕರಿಸಲು ಬಿಜೆಪಿ ಮುಂದಾಗಿರುವುದನ್ನು ನೋಡಿದರೆ ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಕಾಂಗ್ರೆಸ್​ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಎಸ್​ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಕೋರಿದಾಗ ರಾಜ್ಯಪಾಲರು ರಾಜ್ಯದ ಸ್ಥಿತಿಗತಿ ಬಗ್ಗೆ ಅರಿವಿದ್ದು, ಅವರಿಗೆ ಬಹುಮತ ಇದೆಯೇ ಇಲ್ಲವೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸದೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್​ ಕೂಡ ವಿರೋಧ ವ್ಯಕ್ತಪಡಿಸಿದೆ.

ಸರ್ಕಾರ ರಚಿಸುವ ಮುನ್ನ ಸಂವಿಧಾನ, ಪ್ರಜಾಪ್ರಭುತ್ವದ ಸಾಮಾನ್ಯ ಜ್ಞಾನ ಅವಶ್ಯಕ. ಅದರ ಅರಿವಿಲ್ಲದೇ ಬಿಜೆಪಿ ಈ ರೀತಿ ಹೆಜ್ಜೆ ಇಡುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾದ ಬೆಳವಣಿಗೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಕಾಂಗ್ರೆಸ್​ – ಜೆಡಿಎಸ್​ ಪಕ್ಷ ರಾಜ್ಯಪಾಲರ ಮತ್ತು ಬಿಜೆಪಿಯ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ