ಸೋಮವಾರ ಅಧಿವೇಶನ
ವಿಧಾನಸೌಧದಲ್ಲಿ
ನೂತನ ಸಿಎಂ ಬಿಎಸ್ ವೈ ಸುದ್ದಿಗೋಷ್ಠಿ.
ಬಿಎಸ್ ವೈ ಗೆ ಜಗದೀಶ್ ಶೆಟ್ಟರ್,ಮಾಧುಸ್ವಾಮಿ ಸಾಥ್. ನೂತನ ಸಿಎಂ ಯಡಿಯೂರಪ್ಪ ಹೇಳಿಕೆ.
ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನ
ರಾಜ್ಯದ ಜನರಿಗೆ ಸಿಎಂ ಬಿಎಸ್ ವೈ ಕೃತಜ್ಙತೆ. ನನಗೆ ಸಿಎಂ ಆಗಲು ಅವಕಾಶ ಮಾಡಿ ಕೊಟ್ಟವರು ರಾಜ್ಯದ ಜನ. ನಾಲ್ಕೈದು ತಿಂಗಳು ಕಾದು ನೋಡಿ. ಹಿಂದಿನ ಸರ್ಕಾರ, ನಮ್ಮಸರ್ಕಾರದ ಸಾಧನೆ ಗೊತ್ತಾಗಲಿದೆ.
ಪ್ರಾಮಾಣಿಕ ಪ್ರಯತ್ನ ನಾವು ಮಾಡುತ್ತೇವೆ.
ಮೊದಲು ಆಡಳಿತ ಯಂತ್ರ ಸರಿಪಡಿಸಬೇಕಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ.
ದ್ವೇಷಿಸುವವರನ್ನು ಪ್ರೀತಿಯಿಂದ ಕಾಣುತ್ತೇನೆ. ಪ್ರಧಾನಿ ಮೋದಿ, ಅಮಿತ್ ಶಾ ಗುಣಗಾನ.ಇಬ್ಬರ ಆಶೀರ್ವಾದದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ.
ರೈತರ ಬಗ್ಗೆ ನನ್ನ ಮೊದಲ ಆಧ್ಯತೆ.ನೇಕಾರ, ಇತರರ ಅಭಿವೃದ್ಧಿಗೂ ನಮ್ಮ ಅದ್ಯತೆ. ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ಅನುಷ್ಠಾನ.
ಇಂದಿನ ಸಂಪುಟದಲ್ಲಿ ನಾವು ತೀರ್ಮಾನ .
ಎರಡು ಕಂತುಗಳಲ್ಲಿ ನಾಲ್ಕು ಸಾವಿರ ನೀಡುತ್ತೇವೆ.
ಯೋಜನೆಯ ಫಲಾನುಭವಿಗಳಿಗೆ ನೀಡುತ್ತೇವೆ. ನೇಕಾರರ ಸಾಲ ೧೦೦ ಕೋಟಿ ಇದೆ
ರೈತರ, ನೇಕಾರರು ನಮ್ಮ ಮೊದಲ ಕಣ್ಣು.
೧೦೦ ಕೋಟಿ ಸಾಲ ಸಂಪೂರ್ಣ ಮನ್ನಾ. ಸಿಎಂ ಆದ ದಿನವೇ ಬಿಎಸ್ ವೈ ಘೋಷಣೆ.
ರೈತರ ಸಾಲಮನ್ನಾ ವಿಚಾರದಲ್ಲಿ ತಟಸ್ಥ ನಿಲುವು. ನೇಕಾರರಿಗೆ ಮಾತ್ರ ಬಂದ ದಿನವೇ ಬಂಪರ್ ಗಿಫ್ಟ್. ಜು೨೯ ರಂದು ಬೆ.೧೦ ಕ್ಕೆ ವಿಶೇಷ ಅದಿವೇಶನ. ಬಹುಮತ ಸಾಬೀತು, ಫೈನಾನ್ಸ್ ಬಿಲ್ ಮಂಡನೆ ಮಾಡುತ್ತೇವೆ.
ಜು.೩೦ ರಂದು ವಿಧಾನಪರಿಷತ್ ಕಲಾಪ ನಡೆಯಲಿದೆ. ರೈತರ ಸಾಲಮನ್ನಾ ಬಗ್ಗೆ ಘೋಷಣೆಯಿಲ್ಲ.
ಸಾಲದ ಮಾಹಿತಿ ಪಡೆದು ನಿರ್ಧರಿಸುತ್ತೇನೆ ಎಂದರು