ಋಣಮುಕ್ತ ಕಾಯ್ದೆ ಗೆ ರಾಷ್ಟ್ರಪತಿ ಅಂಕಿ ತ

ಋಣಮುಕ್ತ ಕಾಯ್ದೆಯ ಸದ್ಬಳಕೆಗೆ ಕರೆ
——
ಖಾಸಗಿ / ಲೇವಾದೇವಿದಾರರಿಂದ ಕೈಸಾಲ ಪಡೆದಿರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂರಹಿತ ಕಾರ್ಮಿಕರು ಋಣಮುಕ್ತರಾಗಲು ಮೈತ್ರಿ ಸರ್ಕಾರ ರೂಪಿಸಿದ್ದ ಋಣಮುಕ್ತ ಕಾಯಿದೆ (The Karnataka Debt Relief Bill-2018)ಗೆ ಜುಲೈ 16, 2019 ರಂದು ರಾಷ್ಟ್ರಪತಿಗಳ ಅಂಕಿತ ದೊರೆತಿದೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಉಪವಿಭಾಗಾಧಿಕಾರಿಗಳನ್ನು ಇದಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, 90 ದಿನಗಳೊಳಗೆ ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಅವರ ಬಳಿ ಸಲ್ಲಿಸಿದಲ್ಲಿ ಋಣಮುಕ್ತರಾಗಬಹುದು ಎಂದು ತಿಳಿಸಿದರು.

1.20 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದ್ದು, ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಋಣಮುಕ್ತ ಕಾಯ್ದೆಯು ನಾಡಿನ ಜನತೆ ಮೈತ್ರಿ ಸರ್ಕಾರದ ಕೊಡುಗೆಯಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ