ಬೆಂಗಳೂರು, ಜು.23- ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ತಾಜ್ ವೆಸ್ ಎಂಡ್ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಗಹನ ಚರ್ಚೆ ನಡೆಸಿದರು.
ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭಗೊಂಡರೂ ಸಿಎಂ ಮಾತ್ರ ತಾಜ್ವೆಸ್ಟ್ಎಂಡ್ ಹೊಟೇಲ್ನಲ್ಲೇ ಮಧ್ಯಾಹ್ನ 12ರವರೆಗೂ ಇದ್ದರು.
ಈ ವೇಳೆ ಡ್ಯಾಮೇಜ್ ಕಂಟ್ರೋಲರ್ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಿ ಕೆಲ ಕಾಲ ಮಾತುಕತೆ ನಡೆಸಿ ಈಗ ವಿಶ್ವಾಸ ಮತ ಪ್ರಕ್ರಿಯೆ ಮುಗಿಯದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ.ಇದರಿಂದ ಪಾರಾಗುವುದು ಸಾಧ್ಯತೆ ಕಡಿಮೆ ಎಂದು ತಿಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಇದೇ ವೇಳೆ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಗಳು ಕೂಡ ನಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಸಿದ್ದರಾಮಯ್ಯ ಅವರು ಇಂದೇ ವಿಶ್ವಾಸಮತ ಯಾಚಿಸಿ ಮತದಾನ ನಡೆಯಬೇಕು ಎಂದು ಹೇಳಿರುವುದು ಕೂಡ ಸಿಎಂಗೆ ಟೆನ್ಷನ್ ಇಮ್ಮಡಿಗೊಳಿಸಿದೆ.
ಇಂದು ಸಂಜೆ 6 ಗಂಟೆಯ ಡೆಡ್ಲೈನ್ನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ತೀವ್ರ ಸಂಚಲನ ಮೂಡಿಸಿದೆ.