ಬೆಂಗಳೂರು ನಲ್ಲಿ ೨ದಿನ ನಿಷೇಧಾಜ್ಞೆ

ASF Commander Alok Kumar taken charge as Bangalore City Law and Order Additional Commissioner of Police at Police Commissioner office in Bengaluru on Wednesday.

ಬೆಂಗಳೂರಿನಾದ್ಯಂತ ಎರಡು ದಿನ ನಿಷೇದಾಜ್ಞೆ
ಪಕ್ಷೇತರ ಶಾಸಕರ ಅಡಗಿದ್ದಾರಂದು ಕನಕಪುರ ಕಾಂಗ್ರೇಸ್ ಕಾರ್ಯಕರ್ತರು ರೇಸ್‍ಕೋರ್ಸ್ ರಸ್ತೆಯ ನಿತೇಶ್ ಅಪಾರ್ಟ್‍ಮೆಂಟ್‍ಗೆ ನುಗ್ಗಿ ಗಲಾಟೆ ಆರಂಭಿಸಿದರು. ಬಿಜೆಪಿ ಶಾಸಕ ಆಶೋಕ್‍ಗೆ ಸೇರಿದ ಕಟ್ಟಡ ಇದಾಗಿದ್ದು, ವಿಶ್ವಾಸ ಮತಕ್ಕೆ ಈ ಇಬ್ಬರು ಪಕ್ಷೇತರರನ್ನು ಕರೆದೊಯ್ಯುವುದಾಗಿ ಪಟ್ಟು ಹಿಡಿದರು.
ನಂತರದ ಕೆಲ ಸಮಯದಲ್ಲೇ ಆಶೋಕ್ ಬೆಂಬಲಿಗ ಸಂಗಾತಿ ವೆಂಕಟೇಶ್ ಗುಂಪು ಆಗಮಿಸಿ ಪ್ರತಿಭಟನೆ ಶುರು ಮಾಡಿದರು. ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು. ಇಬ್ಬರು ಮೊಂಡತನ ಬಿಡಲಿಲ್ಲ, ಕೊನೆಗೆ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ 48 ಗಂಟೆಗಳ ಕಾಲ ನಿಷೇದಾಜ್ಞೆ ಘೋಷಿಸಿದರು. ಇಂದು ಸಂಜೆ 6ರಿಂದ ಬೆಂಗಳೂರಿನಾದ್ಯಂತ ನಿಷೇದಾಜ್ಞೆ ಜಾರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ