ಹೃದಯ ತಜ್ಞರೇ ಇಲ್ಲದ ಆಸ್ಪತ್ರೆಯಲ್ಲಿ ಶಾಸಕ ಸೀಮಂತ ಪಾಟೀಲ್​ಗೆ ಹೃದ್ರೋಗ ಚಿಕಿತ್ಸೆ ಹೇಗೆ?

ಬೆಂಗಳೂರು/ ಮುಂಬೈ:  ಬಿಜೆಪಿಯಿಂದ ಅಪಹರಣಗೊಂಡಿಲ್ಲ. ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ನಮ್ಮ ವೈದ್ಯರ ಸಲಹೆಯಂತೆ ಮುಂಬೈಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎನ್ನುತ್ತಿರುವ ಸೀಮಂತ ಪಾಟೀಲ್​ ಸುಳ್ಳು ಹೇಳುತ್ತಿದ್ದಾರೆ. ಕಾರಣ ಅವರು ದಾಖಲಾಗಿರುವ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗವೇ ಇಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್​ ನಾಯಕಿ ಯಶೋಮತಿ ಠಾಕೂರ್​​ ಸ್ಪಷ್ಟಪಡಿಸಿದ್ದಾರೆ

ಮುಂಬಯಿನ ಸೆಂಟ್​ ಜಾರ್ಜ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀಮಂತ ಪಾಟೀಲ್​ ಭೇಟಿಮಾಡಲು ಮಹಾರಾಷ್ಟ್ರ ಕಾಂಗ್ರೆಸ್​ ನಾಯಕಿ ಯಶೋಮತಿ ತೆರಳಿದ್ದಾರೆ. ಆದರೆ, ಅವರ ಭೇಟಿಗೆ ಮುಂಬೈ ಪೊಲೀಸರು ಅನುಮತಿ ನೀಡಿಲ್ಲ. ಈ ವೇಳೆ ಮುಂಬೈ ಪೊಲೀಸರೊಂದಿಗೆ ವಾಗ್ವಾದ ನಡೆಸಿದರೂ ಸಾಧ್ಯವಾಗಿಲ್ಲ. ಅಲ್ಲದೇ ಶ್ರೀಮಂತ ಪಾಟೀಲ್​ ದಾಖಲಾಗಿರುವ ಕೊಠಡಿ ಬಳಿ ಈಗಾಗಲೇ ಯಾರಿಗೂ ಅನುಮತಿ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಚೀಟಿ ಲಗತ್ತಿಸಿದ್ದು, ಬಿಗಿ ಪೊಲೀಸ್​ ಬಂದೋ ಬಸ್ತ್​ ನಡೆಸಲಾಗಿದೆ.

ಕಾಂಗ್ರೆಸ್​ ನಾಯಕನ ಭೇಟಿ ವಿಫಲವಾದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಮಹಾರಾಷ್ಟ್ರ ನಾಯಕಿ, ತಮ್ಮದೇ ಪಕ್ಷದ ಶಾಸಕರನ್ನು ಭೇಟಿ ಮಾಡಲು ನಮಗೆ ಬಿಡುತ್ತಿಲ್ಲ. ಆಸ್ಪತ್ರೆಯಲ್ಲಿ 6ಕ್ಕೂ ಹೆಚ್ಚು ಪೊಲೀಸ್​ ತುಕಡಿಗಳಿದ್ದು, 100 ಜನ ಪೊಲೀಸರು ಅವರ ರಕ್ಷಣೆಗೆ ನಿಂತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಅವರನ್ನು ಬಿಜೆಪಿ ರಕ್ಷಣೆ ಮಾಡುತ್ತಿದೆ  ಎಂದಿದ್ದಾರೆ.

ಇನ್ನು ಶ್ರೀಮಂತ ಪಾಟೀಲ್​ ದಾಖಲಾಗಿರುವ ಈ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗವೇ ಇಲ್ಲ. ಇಂತಹ ಆಸ್ಪತ್ರೆಯಲ್ಲಿ ಹೇಗೆ ಅವರು ಎದೆ ನೋವಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಬಿಜೆಪಿ ನಡೆಸುತ್ತಿರುವ ಕೆಲಸ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಇದೇ ಮಾತನ್ನು ಕೆಪಿಸಿಸಿ ಅಧ್ಯಕ್ಷ  ದಿನೇಶ್​ ಗುಂಡೂರಾವ್​ ಕೂಡ ಇದೇ ಮಾತನನ್ನು ಉಚ್ಛರಿಸಿದ್ದು, ಮೈತ್ರಿ ಸರ್ಕಾರವನ್ನು  ಉರುಳಿಸಲು ಬಿಜೆಪಿ ನಾಯಕರು ಶಾಸಕರ ಖರೀದಿಗೆ ಮುಂದಾಗಿದ್ದಾರೆ.

ರಾಜಭವನವನ್ನು ಬಿಜೆಪಿ ನಾಯಕರು ಸ್ವ ಹಿತಾಸಕ್ತಿಗೆ ಬಳಕೆ ಮಾಡುತ್ತಿದ್ದು, ರಾಜ್ಯಪಾಲರಿಂದ ಬಿಜೆಪಿ ರಕ್ಷಣಾ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ