ಬೆಂಗಳೂರು,ಜು.19- ಶಿವಾಜಿನಗರದ ಶಾಸಕ ರೋಷನ್‍ಬೇಗ್ ಅವರು ಇಂದು ಎಸ್‍ಐಟಿ ಮುಂದೆ ಹಾಜರಾಗಿ ನಂತರ ತೆರಳಿದರು.
ಇಂದು ಬೆಳಗ್ಗೆ ಎಸ್‍ಐಟಿ ಕಚೇರಿಗೆ ತೆರಳಿ ರೋಷನ್‍ಬೇಗ್ ಅವರು ಅಧಿಕಾರಿಗಳ ಮುಂದೆ ಹಾಜರಾದ ಸಂದರ್ಭದಲ್ಲಿ ಅಧಿಕಾರಿಗಳು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳಿಗೆ ಬೇಗ್ ಅವರಿಂದ ಉತ್ತರ ಪಡೆದುಕೊಂಡರು.ನಂತರ ಮಧ್ಯಾಹ್ನ ಎಸ್‍ಐಟಿ ಕಚೇರಿಯಿಂದ ಬೇಗ್ ಅವರು ತೆರಳಿದರು.
ಕಳೆದೆರಡು ದಿನಗಳ ಹಿಂದೆ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಲು ರೋಷನ್ ಬೇಗ್ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆಂಬ ಮಾಹಿತಿ ಮೇರೆಗೆ ಎಸ್‍ಐಟಿ ತಂಡ, ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಮೇರೆಗೆ ಬೇಗ್ ಅವರು ಇಂದು ಬೆಳಗ್ಗೆ ಎಸ್‍ಐಟಿ ಮುಂದೆ ಹಾಜರಾಗಿದ್ದರು.
ಐಎಂಎ ಸಂಸ್ಥೆ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್‍ಖಾನ್ ದೇಶ ಬಿಟ್ಟು ಹೋದ ನಂತರ ಬಿಡುಗಡೆ ಮಾಡಿದ ಆಡಿಯೋದಲ್ಲಿ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು 400 ಕೋಟಿ ಹಣವನ್ನು ನನ್ನಿಂದ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೇಗ್ ಅವರನ್ನು ಎಸ್‍ಐಟಿ ವಿಚಾರಣೆಗೊಳಪಡಿಸಿತ್ತು.






