ಶಾಸಕ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆದ ರಾಜ್ಯ ಪೊಲೀಸರ ತಂಡ

ಬೆಂಗಳೂರು,ಜು.19- ತೀವ್ರ ಎದೆನೋವೆಂದು ಮುಂಬೈ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರಿಂದ ರಾಜ್ಯ ಪೆÇಲೀಸರ ತಂಡ ಹೇಳಿಕೆ ಪಡೆದಿದೆ.

ಇಂದು ಬೆಳಗ್ಗೆ 9 ಗಂಟೆಗೆ ಮುಂಬೈ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ತೆರಳಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೆÇಲೀಸರ ತಂಡ ಇಂದೇ ವಿಚಾರಣೆ ನಡೆಸಿದೆ.
ನಮ್ಮ ಪಕ್ಷದ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಗೃಹ ಸಚಿವ ಎಂ.ಬಿ.ಪಾಟೀಲ್‍ಗೆ ಕಿಡ್ನ್ಯಾಪ್ ಆರೋಪ ಸಂಬಂಧ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.

ವಿಧಾನಸೌಧ ಠಾಣೆಯಲ್ಲಿ ದೂರು:
ನಿನ್ನೆ ವಿಧಾನಸೌಧ ಪೆÇಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಕಿಡ್ನಾಪ್ ಆಗಿದ್ದಾರೆ ಎಂದು ದೂರು ದಾಖಲಾಗಿತ್ತು. ಆಗ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ನಗರ ಆಯುಕ್ತ ಅಲೋಕ್‍ಕುಮಾರ್ ಅವರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉತ್ತರ ವಿಭಾಗ ಡಿಸಿಪಿ ನೇತೃತ್ವದ ತಂಡ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆದು ತನಿಖೆ ಮುಂದುವರೆಸಲಿದೆ. ಸದ್ಯ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಜವಾಗಲೂ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಯೇ? ಅಥವಾ ಬೇರೆ ಇನ್ಯಾವುದಾದರೂ ಕಾರಣವಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಸದ್ಯ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಯಲ್ಲಿ ಎದೆ ನೋವಿನ ಕಾರಣ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೀಕರ್‍ಗೂ ಈ ಸಂಬಂಧ ಶ್ರೀಮಂತ್ ಪಾಟೀಲ್ ಅವರು ವಿಡಿಯೋ ಹೇಳಿಕೆಯನ್ನು ಕಳುಹಿಸಿದ್ದರು.
ಈ ನಡುವೆ ಕಾಂಗ್ರೆಸ್ ಸದಸ್ಯರು ನಿನ್ನೆ ಸದನದಲ್ಲಿ ನಮ್ಮ ಶಾಸಕನನ್ನು ಕಿಡ್ನ್ಯಾಪ್ ಮಾಡಲಾಗಿದೆ. ಅವರು ಆರೋಗ್ಯವಾಗಿಯೇ ಇದ್ದಾರೆ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದು ನಮ್ಮ ಸದಸ್ಯರಿಗೆ ರಕ್ಷಣೆ ನೀಡುವಂತೆ ಕೋರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ