![MTB-Nagaraj-01](http://kannada.vartamitra.com/wp-content/uploads/2018/09/MTB-Nagaraj-01-678x377.jpg)
ಮುಂಬೈ, ಜು.19- ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂದಕ್ಕೆ ಪಡೆದ ರಾಮಲಿಂಗಾರೆಡ್ಡಿಯವರ ನಡೆಯನ್ನು ಎಂ.ಟಿ.ಬಿ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ.
ವಿಡಿಯೋದಲ್ಲಿ ತಮ್ಮ ಹೇಳಿಕೆ ದಾಖಲಿಸಿರುವ ಅವರು, ರಾಮಲಿಂಗಾರೆಡ್ಡಿ ಯವರ ಹೇಳಿಕೆ ನಮಗೆ ಆಘಾತವಾಗಿದೆ. ಅವರ ನಾಯಕತ್ವದಲ್ಲೇ ಬೆಂಗಳೂರು ಶಾಸಕರ ಸಭೆ ನಡೆದಿತ್ತು.
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದ್ದು ನಾವೆಲ್ಲರೂ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೆವು. ಇದೀಗ ರಾಮಲಿಂಗಾರೆಡ್ಡಿ ತಮ್ಮ ತೀರ್ಮಾನದಿಂದ ಹಿಂದೆ ಸರಿದಿರುವುದು ನಮಗೆ ಆಘಾತ ಉಂಟು ಮಾಡಿದೆ.ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.