ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಿದ ನವ್‍ಜೋತ್ ಸಿಂಗ್ ಸಿಧು

ನವ್‍ಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗೆ ಬರೆದಿರುವ ರಾಜೀನಾಮೆಯ ಪತ್ರವನ್ನು ತಮ್ಮ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

 

 

 

 

 

 

 

 

 

 

ದೆಹಲಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿ, ಸಿಧು ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದಾರೆ. ಸಿಧು ಅವರಿಗೆ ರಾಜೀನಾಮೆ ಪತ್ರವನ್ನು ಚಂಡೀಗಢದಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತಲುಪಿಸುವಂತೆ ತಾವು ಸೂಚನೆ ನೀಡಿದ್ದಾಗಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ನವ್‍ಜೋತ್ ಸಿಂಗ್ ಸಿಧು ಅವರೊಂದಿಗೆ ತಮಗೆ ಯಾವುದೇ ಭಿನ್ನಮತ ಇಲ್ಲ, 17 ಸಚಿವರ ಪೈಕಿ 13 ಸಚಿವರ ಖಾತೆಗಳನ್ನು ಬದಲಾಯಿಸಿದ್ದೇ, ಸಿಧು ಅವರನ್ನು ಸ್ಥಳೀಯ ಸಂಸ್ಥೆಗಳ ಖಾತೆಯಿಂದ ನವೀಕರಣ ಇಂಧನ ಖಾತೆಗೆ ಬದಲಾಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ಕಲ್‍ರಾಜ್ ಮಿಶ್ರಾ ಅವರನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ನೇಮಕಗೊಳಿಸಿದ್ದಾರೆ. ಈವರೆಗೆ ಹಿಮಚಲ ಪ್ರದೇಶದ ರಾಜ್ಯಪಾಲರಾಗಿದ್ದ ಆಚಾರ್ಯ ದೇವವ್ರತ್ ಅವರನ್ನು ವರ್ಗಾಯಿಸಿ ಗುಜರಾತ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಗಳು ಕ್ರಮವಾಗಿ ಅವರು ಅಧಿಕಾರ ವಹಿಸಿಕೊಂಡಂದಿನಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ