ಬೆಂಗಳೂರು, ಜು.11-ನಾಳೆ ರಾಜ್ಯ ವಿಧಾನಮಂಡಲ ಅಧಿವೇಶನ ಚೆನ್ನಾಗಿಯೇ ನಡೆಯಲಿದೆ.ಯಾವುದೇ ಟೆನ್ಷನ್ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಮ್ಮ ಪಕ್ಷದ ವಿರುದ್ಧ ವಿಧಾನಸೌಧದಲ್ಲಿ ಬಿಜೆಪಿಯವರು ಘೋಷಣೆ ಕೂಗಿದರು.ಅದಕ್ಕೆ ಪ್ರತಿಯಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ನಾವೂ ಕೇಳಿದೆವು.ನಮ್ಮ ಶಾಸಕರನ್ನು ನಾವು ಮಾತನಾಡಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ನಿನ್ನೆ ಗೊಂದಲ ಉಂಟಾದ ಸಂದರ್ಭದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ನಮಗೆ ಅಡ್ಡಿ ಮಾಡಿದರು. ಅದಕ್ಕೆ ಪ್ರತಿಯಾಗಿ ನಾವು ಮಾತನಾಡಲೇಬೇಕಾಯಿತು ಎಂದು ನಿನ್ನೆಯ ಘಟನೆಯನ್ನು ಖಾದರ್ ಸಮರ್ಥಿಸಿಕೊಂಡರು.