ದಯಾಸಾಗರ ಕಡ್ಯಾಳ ಜನ್ಮ ದಿನದ ನಿಮಿತ್ತ ಹಣ್ಣು, ಬಟ್ಟೆ ವಿತರಣೆ

ಬೀದರ್: ಯುವ ಮುಖಂಡ ದಯಾಸಾಗರ ರಾಜು ಕಡ್ಯಾಳ ಅವರ 25ನೇ ಜನ್ಮ ದಿನಾಚರಣೆ ನಿಮಿತ್ತ ಕನ್ನಡಪರ ಸಂಘಟನೆಗಳಿಂದ ಗುರುವಾರ ನಗರದಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಬಡವರಿಗೆ ಬಟ್ಟೆ ವಿತರಣೆ ಮಾಡಲಾಯಿತು.
ನಗರದ ನವಜೀವನ ವಸತಿ ಶಾಲೆಯ ಮಕ್ಕಳಿಗೆ ಹಣ್ಣು ಹಾಗೂ ಬಟ್ಟೆ ವಿತರಣೆ ಮಾಡಲಾಯಿತು. ನಂತರ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ಬಹುತೇಕರು ವಯಕ್ತಿಕವಾಗಿ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಾರೆ. ಆದರೆ ದಯಾಸಾಗರ ಸಮಾಜದ ನೊಂದವರಿಗೆ ಕೊಡುಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಬಡವರ ನೆರವಿಗಾಗಿ ಬಟ್ಟೆ, ಹಣ್ಣು ವಿತರಣೆ ಮಾಡಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಯಾಸಾಗರ ಕಡ್ಯಾಳ ಮಾತನಾಡಿ, ಜನ್ಮ ದಿನಾಚರಣೆ ಮಾಡಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ. ಆದರೆ ಬೆಂಬಲಿಗರ, ಸ್ನೇಹಿತರ ಒತ್ತಾಯದ ಮೇರೆಗೆ ಬಡವರಿಗೆ ನೆರವಾಗುವ ಮೂಲಕ ಜನ್ಮ ದಿನ ಆಚರಸಿಕೊಳ್ಳುತ್ತಿರುವೆ. ಪ್ರತಿಯೊಬ್ಬರು ಸಹ ನಮ್ಮ ಜನ್ಮ ದಿನದಂದು ಸಮಾಜದ ಬಡ ವ್ಯಕ್ತಿಗೆ ನೆರವಿಗೆ ಬರುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಜಾಫಟ್ ಕಡ್ಯಾಳ, ಜೀವನ ರಿಕ್ಕೆ, ಪ್ರಸಾದ ಮನ್ನಳ್ಳಿ, ಸತೀಶ ಕುಂಬಾರವಾಡ, ಅನೀಲ ಭವಾನಿ, ಸಂಜು ಬೇಂದ್ರೆ, ಅನೀಲ, ಲೋಕೇಶ, ಅಶ್ವಿನ್, ದೀಪಕ, ಪವನ ಇತರರಿದ್ದರು. ಈ ವೇಳೆ ಕನ್ನಡಪರ ಸಂಘಟನೆ ಪರವಾಗಿ ದಯಾಸಾಗರ ಅವರಿಗೆ ಹೆಲ್ಮೇಟ್ ನೀಡಿ ಜನ್ಮ ದಿನದ ಶುಭ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ