ಬೆಂಗಳೂರು, ಜು.11- ವಿಧಾನಸೌಧ ಪವಿತ್ರವಾದ ಸ್ಥಳವಾಗಿದ್ದು, ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಕೆಲಸ ಮಾಡಬಾರದೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ವಿಧಾನಸೌಧದಲ್ಲಿ ಗದ್ದಲದ ಘಟನೆ ಆಗಬಾರದಿತ್ತು. ಪ್ರಜಾಪ್ರಭುತ್ವದ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಇಂತಹ ಬೆಳವಣಿಗೆಗಳನ್ನು ನೋಡಿಕೊಂಡು ಬಂದಿದ್ದೇವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಸುಧಾಕರ್ ಅವರ ಮನವೊಲಿಸುವ ಕೆಲಸ ಮಾಡಿದ್ದೇವೆ. ಅದು ನಮ್ಮ ಕರ್ತವ್ಯ.ಕೆಲವರು ಮೊದಲೇ ಹೇಳಿ ನಂತರ ಮನವರಿಕೆ ಮಾಡಲು ಹೋಗುತ್ತಾರೆ.ಆದರೆ, ನಾನು ಆಗಲ್ಲ ಎಂದು ಹೇಳಿದರು.