ಬೆಂಗಳೂರು, ಜು.10-ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭೇಟಿಯಾಗುವ ಉದ್ದೇಶದಿಂದ ಇಂದು ಮಧ್ಯಾಹ್ನ ಶ್ರೀನಿವಾಸ ಗೌಡ ದೆಹಲಿಗೆ ತೆರಳಿದ್ದಾರೆ.
ಅವರುಮುಂಬೈಗೆ ಹೋಗುತ್ತಿಲ್ಲ ಎಂದು ಶಾಸಕರ ಆಪ್ತವಲಯ ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶ್ರೀನಿವಾಸಗೌಡರು ಭೇಟಿಯಾಗಿದ್ದರು. ನಾಳೆ ನವದೆಹಲಿಯಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ದೆಹಲಿಗೆ ಹೋಗಿದ್ದಾರೆ. ಮುಂಬೈನಲ್ಲಿರುವ ಅತೃಪ್ತರ ಶಾಸಕರ ಗುಂಪಿಗೆ ಸೇರಲು ಹೋಗುತ್ತಿಲ್ಲ ಎಂದುಮೂಲಗಳು ಸ್ಪಷ್ಟಪಡಿಸಿವೆ.