![US-KAMALAHARRISS](http://kannada.vartamitra.com/wp-content/uploads/2019/01/US-KAMALAHARRISS-572x381.jpg)
ವಾಷಿಂಗ್ಟನ್, ಜು. 8- ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತೀಯ ಮೂಲದ ಪ್ರಭಾವಿ ಸಂಸದೆ ಕಮಲಾ ಹ್ಯಾರಿಸ್ (54) ಇದೇ ಉದ್ದೇಶಕ್ಕಾಗಿ ಇವರೆಗೆ ಸಾರ್ವಜನಿಕರಿಂದ 23 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಿದ್ದಾರೆ.
ಡೊಮೊಕ್ರೆಟಿಕ್ ಪಕ್ಷದ 20ಕ್ಕೂ ಹೆಚ್ಚು ಸೆನೆಟರ್ಗಳು ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದು, ಕಮಲಾ ಹ್ಯಾರಿಸ್ ಅಗ್ರಮಾನ್ಯರಾಗಿದ್ದಾರೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಡೊನಾಲ್ಡ್ ಟ್ರಂಪ್ ಅವರ ಪ್ರಬಲ ಪ್ರತಿಸ್ಪರ್ಧಿ ಎಂದು ಕಮಲ ಜನವರಿಯಲ್ಲಿ ಘೋಷಿಸಿದ್ದರು.
ಗಿನಿಂದಲೂ ಇವರ ಪರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಮಾಜಿ ಉಪರಾಷ್ಟ್ರಧ್ಯಕ್ಷ ಜಾಯಿ ಬಿಡೆನ್, ಕಮಲ ಹ್ಯಾರಿಸ್ಗೆ ಪೈಪೋಟಿ ನೀಡುವ ಸಿದ್ಧತೆಯಲ್ಲಿದ್ದಾರೆ.
ತಮಿಳುನಾಡು ಮೂಲ ಭಾರತೀಯ ಸಂಜಾತ ಕುಟುಂದಲ್ಲಿ ಜನಿಸಿದ ಕಮಲ ಅತ್ಯುತ್ತಮ ಸಾಮಾಜಿಕ ಕಾರ್ಯಗಳು ಮತ್ತು ಜನಪರ ಹೋರಾಟದ ಮೂಲಕ ಅಮೆರಿಕನ್ನರ ಮನ ಗೆದ್ದಿದ್ದಾರೆ.
ಕಮಲ ಹ್ಯಾರಿಸ್ ಈ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 2.79,000 ಜನರಿಂದ ಒಟ್ಟು 23ದಶಲಕ್ಷ ಡಾಲರ್ ದೇಣಿಗೆಯನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದಾರೆ.
ಈಗಿನಿಂದಲೇ ಚುನಾವಣಾ ಪ್ರಚಾರಕ್ಕಾಗಿ ಬಿರುಸಿನ ಚಟುವಟಿಕೆಯಲ್ಲಿ ತೊಡಗಿರುವ ದಿಟ್ಟ ವನಿತೆ ಕಮಲ ಡೊನಾಲ್ಡ್ ಟ್ರಂಪ್ಗೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.