![raheem](http://kannada.vartamitra.com/wp-content/uploads/2019/07/raheem-381x381.jpg)
ಬೆಂಗಳೂರು, ಜು.8- ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಆಪರೇಷನ್ ಕಮಲಕ್ಕೂ ಸೇರ್ಪಡೆಯಾಗಿಲ್ಲ ಎಂದು ಸಚಿವ ರಹೀಂಖಾನ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಷನ್ಬೇಗ್ ಅವರೊಂದಿಗೆ ಸೇರಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎಂಬ ಬಗ್ಗೆ ವದಂತಿಗಳಿವೆ. ಆದರೆ, ಅವೆಲ್ಲ ಸುಳ್ಳು. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದರು.
ಪಕ್ಷಕ್ಕಾಗಿ ಯಾವುದೇ ತ್ಯಾಗ ಮಾಡಲು ಸಿದ್ಧ. ಎಲ್ಲ ಸಚಿವರೂ ರಾಜೀನಾಮೆ ಕೊಟ್ಟಿದ್ದೇವೆ. ಮುಂದಿನ ಬೆಳವಣಿಗೆಗಳ ಬಗ್ಗೆ ಪಕ್ಷದ ನಿರ್ಧಾರಗಳಿಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.