ಬೆಂಗಳೂರು, ಜು.8- ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿದೇಶದಿಂದ ಹಿಂದಿರುಗಿದ್ದಾರೆ.
ಕುಟುಂಬ ಸದಸ್ಯರ ಜತೆ ಯೂರೋಪ್ ಪ್ರವಾಸದಲ್ಲಿದ್ದ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದಾರೆ.
ಜು.10ರಂದು ಪ್ರವಾಸ ಪೂರ್ಣಗೊಳಿಸಿ ಹಿಂದಿರುಗಬೇಕಿದ್ದ ಅವರು ಇಂದೇ ಹಿಂದಿರುಗಿದ್ದಾರೆ. ದಿನೇಶ್ ಗುಂಡೂರಾವ್ ಅವರ ಪ್ರವಾಸಕ್ಕೆ ಪಕ್ಷದ ವಲಯದಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.