ವಿಶ್ವಯುದ್ಧದಲ್ಲಿ ಟೀಮ್ ಇಂಡಿಯಾ ಬೊಂಬಾಟ್ ಪರ್ಫಾಮನ್ಸ್: ರೋಹಿತ್ ಅಬ್ಬರ, ಸ್ಪೀಡ್ ಸ್ಟಾರ್ ಶಮಿ ಮ್ಯಾಜಿಕ್

ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಯುದ್ಧದಲ್ಲಿ ಕೊಹ್ಲಿ ಸೈನ್ಯ ಬೊಂಬಾಟ್ ಪರ್ಫಾಮನ್ ಕೊಟ್ಟಿದೆ. ಇಂದು ಶ್ರೀಲಂಕಾ ವಿರುದ್ಧ ಆಡುವುದರೊಂದಿಗೆ ಲೀಗ್ ಹಂತವನ್ನ ಮುಗಿಸಲಿದೆ. ಬನ್ನಿ ಹಾಗಾದ್ರೆ ಲೀಗ್ ಹಂತದಲ್ಲಿ ಯಾರೆಲ್ಲ ಅಬ್ಬರಿಸಿದ್ರು ಅನ್ನೋದನ್ನ ನೋಡೋಣ.

ವಿಶ್ವಕಪ್ನಲ್ಲಿ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಕಮಾಲ್..!
ಯೆಸ್. ಟೀಮ್ ಇಂಡಿಯಾದಲ್ಲಿ ಯಾರ್ ಅಬ್ಬರಿಸುತ್ತಾರೋ ಬಿಡ್ತಾರೋ ಗೊತ್ತಿಲ್ಲ..ಆದ್ರೆ, ಟೀಮ್ ಇಂಡಿಯಾದ ಜವಾಬ್ದಾರಿನ್ನ ಹೆಗಲೆ ಮೇಲೆ ಹೊತ್ತು ಸಾಗುತ್ತಿರುವುದು ಮಾತ್ರ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ.. ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಳೆಗಳನ್ನ ಬರೆಯುತ್ತಿರುವ ಉಭಯ ಆಟಗಾರರು ರನ್ ಗಳಿಕೆಯಲ್ಲೂ ಮುಂದಿದ್ದಾರೆ.. ಇನ್ನು ಟೂರ್ನಿಯಲ್ಲಿ ಒಂದೆಡೆ ರೋಹಿತ್ ಶರ್ಮಾ ಶತಕಗಳ ಮೇಲೆ ಶತಕ ಸಿಡಿಸಿದ್ರೆ.

ನಾಯಕ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಐದು ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರ ಸ್ಥಂಭವಾಗಿದ್ದಾರೆ. ಆರಂಭದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಎದುರಾಳಿ ವಿರುದ್ಧ ರನ್ ಹೊಳೆಯನ್ನೆ ಹರಿಸುತ್ತಿದ್ದಾರೆ. ನಂತರ ನಾಯಕ ವಿರಾಟ್ ಕೊಹ್ಲಿ ರನ್ ಗಳಿಕೆ ಮುಂದುವರಿಯುತ್ತೆ. ಈ ಇಬ್ಬರು ಆಟಗಾರರ ರನ್ ದಾಹದಿಂದಗಿಯೇ ಇಂದು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಣ್ಣಿಗೆ ಕಾಣದಂತಾಗಿದೆ.

ವಿಶ್ವಕಪ್ನಲ್ಲಿ ರೋಹಿತ್ ಸಾಧನೆ
ವಿಶ್ವಕಪ್ನಲ್ಲಿ 7 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 4 ಶತಕ ಹಾಗೂ 1 ಅರ್ಧಶತಕ ಒಳಗೊಂಡ 544 ರನ್ಗಳನ್ನ ಬಾರಿಸಿದ್ದಾರೆ. ಪಾಕ್ ವಿರುದ್ಧ ಸಿಡಿಸಿದ 140 ರನ್ ಹೈಯೆಸ್ಟ್ ಸ್ಕೋರ್ ಆಗಿದೆ.

ವಿಶ್ವಕಪ್ನಲ್ಲಿ ವಿರಾಟ್ ಸಾಧನೆ
ವಿಶ್ವಕಪ್ನಲ್ಲಿ 7 ಪಂದ್ಯಗಳನ್ನಾಡಿರುವ ವಿರಾಟ್ 5 ಅರ್ಧಶತಕ ಒಳಗೊಂಡ 544 ರನ್ಗಳನ್ನ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ 82 ರನ್ ಹೈಯೆಸ್ಟ್ ಸ್ಕೋರ್ ಆಗಿದೆ..

ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಶೈನ್..!
ಟೀಂ ಇಂಡಿಯಾ ಸ್ಟ್ರೆಂಥ್ ಬ್ಯಾಟಿಂಗ್. ಆದ್ರೆ, ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಭಾರತೀಯ ಸ್ಟ್ರೆಂಥ್ ಆಗ್ತಿದೆ. ಪಂದ್ಯದ ಗೆಲುವಿನ ರೂವಾರಿಗಳು ಬೌಲರ್ಗಳೇ ಆಗ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರ ಕಮಾಲ್ ನಡೆದೇ ಇದೆ. ಭಾರತ ಗೆದ್ದ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳಿಗಿಂತ ಬೌಲರ್ಗಳ ಕೊಡುಗೆ ಜಾಸ್ತಿ ಇದೆ. ಸದ್ಯಕ್ಕೆ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಬೌಲರ್ಗಳೇ ಕಾರಣಕರ್ತರು ಅನ್ನೋದು ಮರೆಯುವಂತಿಲ್ಲ. ಸೌತ್ ಆಫ್ರಿಕಾ, ಬಲಿಷ್ಠ ಆಸ್ಟ್ರೇಲಿಯಾ, ಪಾಕ್, ಕ್ರಿಕೆಟ್ ಶಿಶು ಅಫ್ಘಾನ್, ಬಾಂಗ್ಲಾ ವಿರುದ್ದದ ಪಂದ್ಯವನ್ನೂ ಗೆಲ್ಲಿಸಿದ್ದು ಇದೇ ಬೌಲರ್ಸ್. ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧ ದಾಳಿ ನಡೆಸುವ ಮೂಲಕ ಟೀಮ್ ಇಂಡಿಯಾ ಪಾಲಿನ ಮ್ಯಾಚ್ ವಿನ್ನರ್ಗಳಾಗಿ ರೂಪುಗೊಂಡಿದ್ದಾರೆ…

ಬೂಮ್ರಾ, ಶಮಿ ವೇಗಕ್ಕೆ ಎದುರಾಳಿ ಕಕ್ಕಾಬಿಕ್ಕಿ..!
ಈಗಾಗಲೇ 3 ಮಾದರಿ ಕ್ರಿಕೆಟ್ನಲ್ಲಿ ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ತಾವೇನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಬದಲಿಗೆ ಅಫ್ಘಾನ್ ವಿರುದ್ಧ ತಂಡದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಶಮಿ ಗೆಲುವಿಜನ ರೂವಾರಿಯಾದ್ರು.. ಇನ್ನೂ ಪಂದ್ಯಪಂದ್ಯಕ್ಕು ಮತ್ತಷ್ಟು ಶೈನ್ ಆದ ಶಮಿ.. ಸತತ ಮೂರು ಪಂದ್ಯಗಳಲ್ಲಿ ನಾಲ್ಕು ಗೊಂಚಲು ವಿಕೆಟ್ ಪಡೆದ ಮೊದಲ ಬೌಲರ್ ಎಸಿಸಿಕೊಂಡ್ರು. ಅಲ್ಲದೆ ಮಹತ್ತರ ಘಟ್ಟದಲ್ಲಿ ಎದುರಾಳಿ ವಿಕೆಟ್ ಪಡೆಯೋ ಮೂಲಕ ಟೀಮ್ ಇಂಡಿಯಾದ ಹಿರೋ ಎನಿಸಿಕೊಂಡ್ರು.. ಇನ್ನೂ ಒಂದೆಡೆ ವಿಕೆಟ್ ಪಡೆಯುತ್ತಿದ್ರೆ, ಜಸ್ಪ್ರೀತ್ ಬೂಮ್ರಾ ಎದುರಾಳಿ ರನ್ ದಾಹಕ್ಕೆ ಕಡಿವಾಣ ಹಾಕೋದ್ರ ಜೊತಗೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆದು ಎದುರಾಳಿ ಗೆಲುವಿನ ಕಂಟಕವಾಗಿ ಕಾಡಿದ್ರು. ಜೊತೆಗೆ ಸ್ಪಿನ್ನರ್ ಚಾಹಲ್ ಉತ್ತಮ ಸಾಥ್ ನೀಡಿದ್ರು…

ಜಸ್ಪ್ರೀತ್ ಬೂಮ್ರಾ ಸಾಧನೆ
7 ಪಂದ್ಯಗಳಿಂದ 14 ವಿಕೆಟ್ ಕಬಳಿಸಿರುವ ಬೂಮ್ರಾ, 4ಕ್ಕೆ 55 ರನ್ ನೀಡಿರುವುದು ಬೆಸ್ಟ್ ಫರ್ಪಾಮೆನ್ಸ್ ಆಗಿದೆ. 4.60 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ..

ವಿಶ್ವಕಪ್ನಲ್ಲಿ ಶಮಿ ಸಾಧನೆ
4 ಪಂದ್ಯಗಳಿಂದ 14 ವಿಕೆಟ್ ಕಬಳಿಸಿರುವ ಮೊಹಮ್ಮದ್ ಶಮಿ, ವಿಂಡೀಸ್ ವಿರುದ್ಧ 4ಕ್ಕೆ 16 ರನ್ ನೀಡಿರುವುದು ಬೆಸ್ಟ್ ಬೌಲಿಂಗ್ ಆಗಿದ್ದು, 5.48 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ಒಟ್ಟಾರೆ ವಿಶ್ವ ಯುದ್ಧ ಗೆಲ್ಲಲು ಕೊಹ್ಲಿ ಸೈನ್ಯಕ್ಕೆ ಇನ್ನು ಎರಡು ಹೆಜ್ಜೆ ಬಾಕಿ ಇದ್ದು ಇನ್ನೆರಡು ಮಹಾ ಯುದ್ದವನ್ನ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ