ಯಾವ ವಸ್ತು ದುಬಾರಿ, ಯಾವುದು ಅಗ್ಗ ಇಲ್ಲಿದೆ ಬಜೆಟ್​ ವಿವರ

ನವದೆಹಲಿ: ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ಅ​ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಮಂಡಿಸಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ ನಿರ್ಮಲಾ ಸೀತಾರಾಮನ್​​ ಪೆಟ್ರೋಲ್​ ಡಿಸೇಲ್​ ಸೇರಿದಂತೆ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ಸಮಯದಲ್ಲಿ ವಿದ್ಯುತ್​ ಚಾಲಿಕ ವಾಹನ ಸೇರಿದಂತೆ ಅನೇಕ ವಸ್ತುಗಳ ಬೆಲೆಯನ್ನು ಇಳಿಸಲಾಗಿದೆ.

ಇನ್ನು ಈ ಬಾರಿ ಬಜೆಟ್​ನಲ್ಲಿ ಯಾವುದರ ಬೆಲೆ ಹೆಚ್ಚಾಗಿದೆ ಯಾವುದು ಕಡಿಮೆಯಾಗಿದೆ ಎಂಬ ವಿವರ ಇಂತಿದೆ.

ಬೆಲೆ ಏರಿಕೆ ವಸ್ತುಗಳು

  • ಚಿನ್ನ, ಅಮೂಲ್ಯ ಲೋಹ, ತೈಲ ಬೆಲೆ ಏರಿಕೆ
  • ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ
  • ಗೋಡಂಬಿ, ಕಾರು, ಬೈಕ್​ ಬೆಲೆ ದುಬಾರಿ
  • ಪ್ಲಾಸ್ಟಿಕ್​, ಸೀಲಿಂಗ್ ಕವರ್​, ಇಂಡಸ್ಟ್ರಿಯಲ್ ಆಸಿಡ್,
  • ಮುದ್ರಣ ಕಾಗದದ ಶೇ.10ರಷ್ಟು ತೆರಿಗೆ ಹೆಚ್ಚಳ
  • ಸ್ಟೈನ್​ಲೆಸ್​ ಸ್ಟೀಲ್​ ಮೇಲೆ ಶೇ.2.5 ತೆರಿಗೆ ಏರಿಕೆ
  • ಸೆರಾಮಿಕ್​ ಟೈಲ್ಸ್​ ಮೇಲೆ ಶೇ.5 ತೆರಿಗೆ ಏರಿಕೆ
  • ಪೀಠೋಪಕರಣ, ಬಾಗಿಲುಗಳ ತೆರಿಗೆ ಏರಿಕೆ
  • ಎಸಿ ಮೇಲಿನ ಸುಂಕ ಶೇ.10 ತೆರಿಗೆ ಏರಿಕೆ
  • ಸ್ಟೋನ್​ ಕ್ರಷರ್ ಮೇಲೆ ಶೇ.7 ತೆರಿಗೆ ಏರಿಕೆ
  • ಪಾಮ್ ಆಯಿಲ್​, ಫ್ಯಾಟಿ ಆಯಿಲ್​, ರಬ್ಬರ್​,
  • ಆಟೋ ಬಿಡಿಭಾಗಗಳು, ಪಿವಿಸಿ, ಮಾರ್ಬಲ್,
  • ಸಿಸಿಟಿವಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾ ದುಬಾರಿ
  • ತಂಬಾಕು ಉತ್ಪನ್ನ ದುಬಾರಿ- ನಿರ್ಮಲಾ

ಬೆಲೆ ಇಳಿಕೆಯಾದ ವಸ್ತುಗಳು

  • ಸ್ವದೇಶಿ ನಿರ್ಮಿತ ವಸ್ತುಗಳ ಬೆಲೆ ಇಳಿಕೆ
  • ಗೃಹೋಪಯೋಗಿ ವಸ್ತುಗಳ ಬೆಲೆ ಇಳಿಕೆ
  • ಜಿಮ್​ ಉಪಕರಣ, ಕ್ರೀಡಾ ಸಾಮಗ್ರಿಗಳು,
  • ಚಾಕೊಲೇಟ್​, ಮಾಲ್ಟ್​, ಹಾಲು ಉತ್ಪನ್ನ,
  • ಟಿವಿ, ಫ್ರಿಡ್ಜ್​, ವಾಶಿಂಗ್ ಮೆಷಿನ್​ ಅಗ್ಗ
  • ಕೃಷಿ, ತೋಟಗಾರಿಕೆ, ಅರಣ್ಯ ಉಪಕರಣ,
  • ಸೆಣಬು, ಹತ್ತಿ, ಬಿದಿರು, ಜವಳಿ ಉತ್ಪನ್ನಗಳು
  • ಟೈಲರಿಂಗ್​ ಮೆಷಿನ್​, ಕನ್ನಡಕಗಳು ಅಗ್ಗ
  • 20 ಲೀಟರ್​ ಗೀಸರ್, ಸ್ಟೌ, ಸೀಮೆಣ್ಣೆ ಅಗ್ಗ
  • ಮೆಹಂದಿ, ರವೆ, ರೋಟಿ, ಕುಕ್ಕರ್​ಗಳ ಬೆಲೆ ಇಳಿಕೆ
  • ಆಯುರ್ವೇದ, ಯುನಾನಿ, ಹೋಮಿಯೋಪತಿ ಔಷಧಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ