ನವದೆಹಲಿ: ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಡಿಸೇಲ್ ಸೇರಿದಂತೆ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ಸಮಯದಲ್ಲಿ ವಿದ್ಯುತ್ ಚಾಲಿಕ ವಾಹನ ಸೇರಿದಂತೆ ಅನೇಕ ವಸ್ತುಗಳ ಬೆಲೆಯನ್ನು ಇಳಿಸಲಾಗಿದೆ.
ಇನ್ನು ಈ ಬಾರಿ ಬಜೆಟ್ನಲ್ಲಿ ಯಾವುದರ ಬೆಲೆ ಹೆಚ್ಚಾಗಿದೆ ಯಾವುದು ಕಡಿಮೆಯಾಗಿದೆ ಎಂಬ ವಿವರ ಇಂತಿದೆ.
ಬೆಲೆ ಏರಿಕೆ ವಸ್ತುಗಳು
- ಚಿನ್ನ, ಅಮೂಲ್ಯ ಲೋಹ, ತೈಲ ಬೆಲೆ ಏರಿಕೆ
- ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ
- ಗೋಡಂಬಿ, ಕಾರು, ಬೈಕ್ ಬೆಲೆ ದುಬಾರಿ
- ಪ್ಲಾಸ್ಟಿಕ್, ಸೀಲಿಂಗ್ ಕವರ್, ಇಂಡಸ್ಟ್ರಿಯಲ್ ಆಸಿಡ್,
- ಮುದ್ರಣ ಕಾಗದದ ಶೇ.10ರಷ್ಟು ತೆರಿಗೆ ಹೆಚ್ಚಳ
- ಸ್ಟೈನ್ಲೆಸ್ ಸ್ಟೀಲ್ ಮೇಲೆ ಶೇ.2.5 ತೆರಿಗೆ ಏರಿಕೆ
- ಸೆರಾಮಿಕ್ ಟೈಲ್ಸ್ ಮೇಲೆ ಶೇ.5 ತೆರಿಗೆ ಏರಿಕೆ
- ಪೀಠೋಪಕರಣ, ಬಾಗಿಲುಗಳ ತೆರಿಗೆ ಏರಿಕೆ
- ಎಸಿ ಮೇಲಿನ ಸುಂಕ ಶೇ.10 ತೆರಿಗೆ ಏರಿಕೆ
- ಸ್ಟೋನ್ ಕ್ರಷರ್ ಮೇಲೆ ಶೇ.7 ತೆರಿಗೆ ಏರಿಕೆ
- ಪಾಮ್ ಆಯಿಲ್, ಫ್ಯಾಟಿ ಆಯಿಲ್, ರಬ್ಬರ್,
- ಆಟೋ ಬಿಡಿಭಾಗಗಳು, ಪಿವಿಸಿ, ಮಾರ್ಬಲ್,
- ಸಿಸಿಟಿವಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾ ದುಬಾರಿ
- ತಂಬಾಕು ಉತ್ಪನ್ನ ದುಬಾರಿ- ನಿರ್ಮಲಾ
ಬೆಲೆ ಇಳಿಕೆಯಾದ ವಸ್ತುಗಳು
- ಸ್ವದೇಶಿ ನಿರ್ಮಿತ ವಸ್ತುಗಳ ಬೆಲೆ ಇಳಿಕೆ
- ಗೃಹೋಪಯೋಗಿ ವಸ್ತುಗಳ ಬೆಲೆ ಇಳಿಕೆ
- ಜಿಮ್ ಉಪಕರಣ, ಕ್ರೀಡಾ ಸಾಮಗ್ರಿಗಳು,
- ಚಾಕೊಲೇಟ್, ಮಾಲ್ಟ್, ಹಾಲು ಉತ್ಪನ್ನ,
- ಟಿವಿ, ಫ್ರಿಡ್ಜ್, ವಾಶಿಂಗ್ ಮೆಷಿನ್ ಅಗ್ಗ
- ಕೃಷಿ, ತೋಟಗಾರಿಕೆ, ಅರಣ್ಯ ಉಪಕರಣ,
- ಸೆಣಬು, ಹತ್ತಿ, ಬಿದಿರು, ಜವಳಿ ಉತ್ಪನ್ನಗಳು
- ಟೈಲರಿಂಗ್ ಮೆಷಿನ್, ಕನ್ನಡಕಗಳು ಅಗ್ಗ
- 20 ಲೀಟರ್ ಗೀಸರ್, ಸ್ಟೌ, ಸೀಮೆಣ್ಣೆ ಅಗ್ಗ
- ಮೆಹಂದಿ, ರವೆ, ರೋಟಿ, ಕುಕ್ಕರ್ಗಳ ಬೆಲೆ ಇಳಿಕೆ
- ಆಯುರ್ವೇದ, ಯುನಾನಿ, ಹೋಮಿಯೋಪತಿ ಔಷಧಿ