ಜು.13 ರಂದು ಉಪಸನಾ ಟ್ರಸ್ಟ್‍ನ 20ನೇ ವಾರ್ಷಿಕೋತ್ಸವ

Varta Mitra News

ಬೆಂಗಳೂರು,ಜು.6- ಉಪಸನಾ ಟ್ರಸ್ಟ್‍ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಜು.13ರಂದು ಜೆಎಸ್‍ಎಸ್ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮತ್ತು ಗೀತಗಾಯನ, ನೃತ್ಯ ಹಾಗೂ ಭಾವಗುದ್ಧ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಗಾಯಕ-ಸಂಗೀತ ನಿರ್ದೇಶಕ ದಿ.ಜಿ.ವಿ.ಅತ್ರಿ ನೆನಪಿನಾರ್ಥ ಉಪಾಸನಾ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿಯನ್ನು ಪ್ರಸಿದ್ದ ಸುಗಮಸಂಗೀತ ಗಾಯಕ ರಾಘವೇಂದ್ರ ಬಿಜಾಡಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಹಿರಿಯ ಕೊಳಲು ವಾದಕ ದಿ.ಎನ್.ಎಸ್.ಮುರುಳೀಧರ ನೆನಪಿನಾರ್ಥ ರಿದಂಪ್ಯಾಡ್ಸ್ ವಾದಕ ರಾಘವೇಂದ್ರ ರಂಗಧೋಳ್ ಅವರಿಗೆ ನಾದೋಪಾಸನಾ ಪ್ರಶಸ್ತಿ ನೀಡಲಾಗುತ್ತಿದೆ.

ಉಪಾಸನಾ, ಆಲಾಪನಾ ಕಲಾ ಸಂಸ್ಥೆ, ಸ್ವರಸ್ಮಿತಾ ಟ್ರಸ್ಟ್, ತುಮಕೂರಿನ ಭಾವಾಲಯ ಟ್ರಸ್ಟ್ , ಆಘ್ಯ ನೃತ್ಯ ಕಲಾಮಂದಿರ , ಡಿವೈನ ಸ್ಟ್ರಿಂಗ್ಸ ಅಂಡ್ ಮೆಲೋಡಿ ಕೀಸ್ ವಿದ್ಯಾರ್ಥಿಗಳಿಂದ ಗೀತಾಗಾಯನ ಮತ್ತು ನೃತ್ಯ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕøತ ಡಾ.ಶಿವಮೊಗ್ಗ ಸುಬ್ಬಣ್ಣ ವಹಿಸಲಿದ್ದು, ಕವಿ ಎಚ್.ಡುಂಡಿರಾಜ್ ಭಾವಗುಚ್ಛ ಸಿಡಿ ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಲಯವಾದ್ಯಗಾರ ಹಾಗೂ ಸಂಗೀತ ನಿರ್ದೇಶಕ ಬಾಲಸುಬ್ರಹ್ಮಣ್ಯಂ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಹರ್ಷ ಲಕ್ಷ್ಮಣ್ ಆಗಮಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ