![sri 2](http://kannada.vartamitra.com/wp-content/uploads/2019/07/sri-2-1-678x303.jpg)
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ಧದಲ್ಲಿ ಕೊಹ್ಲಿ ಸೈನ್ಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಂಕಾ ತಂಡವನ್ನ ಎದುರಿಸಲಿದೆ. ಇತ್ತ ದಿಮುತ್ರತ್ನೆ ನೇತೃತ್ವದ ಲಂಕಾ ತಂಡ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಕೊಟ್ಟಿದ್ದು ಟೀಮ್ ಇಂಡಿಯಾ ವಿರುದ್ಧ ಕೊನೆಯ ಪಂದ್ಯ ಆಡಿ ಟೂರ್ನಿಯಿಂದಲೇ ಹೊರ ಬೀಳಲಿದೆ. ಲೀಡ್ಸ್ ಅಂಗಳದಲ್ಲಿ ನಡೆಯಲಿರುವ ಕದನದ ಕಂಪ್ಲೀಟ್ ಡಿಟೇಲ್ಸ್ನ್ನ ನೋಡೋಣ ಬನ್ನಿ .
ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿಶ್ವ ಯುದ್ದದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದು 1 ಪಂದ್ಯದಲ್ಲಿ ಸೋಲು ಕಂಡಿದೆ. 13 ಅಂಕಗಳೊಂದಿಗೆ ಕೊಹ್ಲಿ ಸೈನ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಇತ್ತ ಶ್ರೀಲಂಕಾ ತಂಡ ಆಡಿದ 8 ಪಂದ್ಯಗಳಲ್ಲಿ 3 ಪಂದ್ಯಗಳನ್ನ ಗೆದ್ದು 3 ಪಂದ್ಯಗಳನ್ನ ಕೈಚೆಲ್ಲಿದೆ. ಕೊನೆಯ ಪಂದ್ಯವನ್ನ ಆಡುತ್ತಿರುವ ಲಂಕಾಕ್ಕೆ ಗೆಲುವಿನೊಂದಿಗೆ ವಿದಾಯ ಹೇಳಲು ಪ್ಲಾನ್ ಮಾಡಿದೆ.
ಲಂಕಾ ಧ್ವಂಸ ಮಾಡಿ ಅಗ್ರಪಟ್ಟಕ್ಕೇರಲು ಕೊಹ್ಲಿ ಸೈನ್ಯ ಪ್ಲಾನ್
ಈಗಾಗಲೇ ಸೆಮಿ ಫೈನಲ್ ಪ್ರವೇಶಿಸಿರುವ ಕೊಹ್ಲಿ ಸೈನ್ಯ ಸಿಂಹಳೀಯರ ವಿರುದ್ಧದ ಕದನ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ ಆಗಿದೆ. ಆದರೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಬೇಕಿದ್ರೆ ಇಂದು ಲೀಡ್ಸ್ ಅಂಗಳದಲ್ಲಿ ಲಂಕಾವನ್ನ ಧ್ವಂಸ ಮಾಡಲೇಬೇಕಿದೆ. ಟೀಮ್ ಇಂಡಿಯಾ ಲಂಕಾ ವಿರುದ್ಧ ಗೆದ್ದು ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೌತ್ ವಿರುದ್ಧ ಸೋತ್ರೆ ಟೀಮ್ ಇಂಡಿಯಾ ನಂ.1 ಪಟ್ಟಕ್ಕೇರಲಿದ್ದು ನ್ಯೂಜಿಲೆಂಡ್ ತಂಡವನ್ನ ಎದುರಿಸುವುದು ಪಕ್ಕಾ ಆಗಲಿದೆ.
ಮಿಡ್ಲ್ ಆರ್ಡರ್ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ ಬ್ಲೂ ಬಾಯ್ಸ್
ಸೆಮಿಫೈನಲ್ ಕದನವನ್ನ ಆಡುವ ಮುನ್ನ ಕೊಹ್ಲಿ ಸೈನ್ಯ ಬ್ಯಾಟಿಂಗ್ ಲೈನ್ಅಪ್ನ್ನ ಸರಿ ಪಡಿಸಿಕೊಳ್ಳಬೇಕಿದೆ. ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ , ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ತಂಡದ ಮಿಡ್ಲ್ ಆರ್ಡರ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿತ್ತು. ಸೆಮಿಫೈನಲ್ ಕದನಕ್ಕೂ ಮುನ್ನ ಲಂಕಾ ವಿರುದ್ಧ ನಡೆಯುವ ಕದನದಲ್ಲಿ ಮಿಡ್ಲ್ ಆರ್ಡರ್ ಕ್ರಮಾಂಕವನ್ನ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕಿದೆ. ರಿಷಭ್ ಪಂತ್ , ಕೇದಾರ್ ಜಾಧವ್, ಎಮ್.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ತಮ್ಮ ತಾಕತ್ತನ್ನ ತೋರಿಸಬೇಕಿದೆ. ಅದರಲ್ಲೂ ಡೆತ್ ಓವರ್ಗಳಲ್ಲಿ ಧೋನಿ ರನ್ ಮಳೆಯನ್ನೆ ಸುರಿಸಬೇಕಿದೆ.
ಅವಕಾಶಕ್ಕಾಗಿ ಕಾಯುತ್ತಿರುವ ಜಡ್ಡುಗೆ ಸಿಗುತ್ತಾ ಚಾನ್ಸ್ ?
ಫಾರ್ಮ್ನಲ್ಲಿದ್ರೂ ಆಡಲು ಅವಕಾಶ ಸಿಗದೇ ವಂಚಿತರಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾಗೆ ಅವಕಾಶ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಒಂದು ವೇಳೆ ಅವಕಾಶ ಸಿಕ್ಕರೆ ರವೀಂದ್ರ ಜಡೇಜಾ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡು ಸೆಮಿಫೈನಲ್ಗೆ ಅರ್ಹನಾಗಿದ್ದೇನೆ ಎಂಬುದನ್ನ ಪ್ರೂವ್ ಮಾಡಬೇಕಿದೆ.
ಏಕದಿನ ಕ್ರಿಕೆಟ್ನಲ್ಲಿ ಇಂಡೊ – ಲಂಕಾ ಫೈಟ್
ಇದುವರೆಗೂ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳು 158 ಏಕದಿನ ಪಂದ್ಯಗಳನ್ನಾಡಿವೆ. ಇದರಲ್ಲಿ ಟೀಮ್ ಇಂಡಿಯಾ 90 ಪಂದ್ಯಗಳನ್ನ ಗೆದ್ರೆ ಶ್ರೀಲಂಕಾ 56 ಪಂದ್ಯಗಳನ್ನ ಗೆದ್ದಿವೆ. ಒಂದು ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. 11 ಪಂದ್ಯಗಳು ಫಲಿತಾಂಶ ಕಾಣದೇ ರದ್ದಾಗಿದೆ.
ವಿಶ್ವಕಪ್ನಲ್ಲಿ ಇಂಡೋ- ಲಂಕಾ ಫೈಟ್
ವಿಶ್ವಕಪ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು 8 ಪಂದ್ಯಗಳನ್ನಾಡಿವೆ. ಇದರಲ್ಲಿ ಭಾರತ 3 ಗೆಲುವು ಕಂಡಿದ್ರೆ ಲಂಕಾ ತಂಡ 4 ಪಂದ್ಯಗಳನ್ನ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ.
ಮಲಿಂಗಾಗೆ ಗೆಲುವಿನ ಉಡುಗೊರೆ ಕೊಡಲು ಸಿಂಹಳೀಸ್ ಸಜ್ಜು
ಟೂರ್ನಿಯಿಂದ ಹೊರ ಬಿದ್ದಿರುವ ಲಂಕಾಕ್ಕೆ ಇಂದಿನ ಪಂದ್ಯದಲ್ಲಿ ಸೋತರೂ ನಷ್ಟವಿಲ್ಲ. ಆದರೆ ಕೊನೆಯ ವಿಶ್ವಕಪ್ ಆಡುತ್ತಿರುವ ತಂಡದ ಸ್ಟಾರ್ ಬೌಲರ್ ಲಸಿತ್ ಮಲಿಂಗಾಗೆ ಸಿಂಹಳೀಯರು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಚೆನ್ನಾಗಿ ಆಡಿರುವ ಆವಿಷ್ಕಾ ಫರ್ನೆಡೊ ಒಳ್ಳೆಯ ಫಾರ್ಮ್ನಲ್ಲಿದ್ದು ಹೇಗೆ ಆಡ್ತಾರೆ ಅನ್ನೋದು ಎಲ್ಲರ ಕುತೂಹಲವಾಗಿದೆ.