ಬೆಂಗಳೂರು,ಜು.06-ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕವಾಗಿ 11 ಮಂದಿ ಶಾಸಕರು ದಿಡೀರನೆ ಸ್ಪೀಕರ್ ಕಚೇರಿಗೆ ಬಂದು ಅವರ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದಾರೆ. ಮೂವರು ಜೆಡಿಎಸ್ ಮತ್ತು ಎಂಟು ಮಂದಿ ಕಾಂಗ್ರೇಸ್ ಶಾಸಕರಿದ್ದಾರೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್ ಮಂಗಳವಾರ ಕಚೇರಿಗೆ ಆಗಮಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ಅಸ್ಥಿರಗೊಂಡಿರುವ ಬಗ್ಗೆ ಆತಂಕಗೊಂಡಿರುವ ಸಿಎಂ ಕುಮಾರಸ್ವಾಮಿ ಇಂದು ರಾತ್ರಿ ಯಾವುದೇ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ಜೊತೆ ಚಚಿಸಿಲಿದ್ದಾರೆ.