ಆಂಗ್ಲರ ನಾಡಯುತ್ತಿರುವ ವಿಶ್ವ ಯುದ್ಧದಲ್ಲಿ ಕೊಹ್ಲಿ ಸೈನ್ಯ ಜಭರ್ದಸ್ತ್ ಪರ್ಫಾಮನ್ಸ್ ಕೊಟ್ಟು ಸೆಮಿಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಪರಾಕ್ರಮ ಮೆರೆದಿದೆ. ಟೀಮ್ ಇಂಡಿಯಾ ಈ ಪಾಠಿ ಬೊಂಬಾಟ್ ಪರ್ಫಾಮನ್ಸ್ ಕೊಟ್ಟಿದೆ ಅಂದ್ರೆ ಇದಕ್ಕೆ ತಂಡದ ಓಪನರ್ಸ್ ಗಳಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಕಾರಣರಾಗಿದ್ದಾರೆ. ಈ ಕಾರಣ್ಕಾಗಿ ತಂಡದ ಪಾಲಿಗೆ ಜೋಡೆತ್ತುಗಳಾಗಿದ್ದಾರೆ.
ಕೊಹ್ಲಿ ಸೈನ್ಯ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ಕೊಟ್ಟಿದ್ರೆ ಅದಕ್ಕೆ ತಂಡದ ಓಪನರ್ಸ್ಗಳೇ ಕಾರಣರಾಗಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಕಾಣುವಲ್ಲಿ ತಂಡದ ಓಪನರ್ಸ್ಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅದರಲ್ಲೂ ಹಿಟ್ಮ್ಯಾನ್ ರೋಹಿತ್ ಶರ್ಮಾ 4 ಶತಕಗಳನ್ನ ಬಾರಿಸಿ ತಂಡದ ಗೆಲುವಿನಲ್ಲಿ ಸಿಂಹ ಪಾಲು ಪಡೆದಿದ್ದಾರೆ.
ಧವನ್ ಸ್ಥಾನದಲ್ಲಿ ಕನ್ನಡಿಗ ರಾಹುಲ್ ಸಾಲಿಡ್ ಬ್ಯಾಟಿಂಗ್
ಟೂರ್ನಿ ಆರಂಭದಲ್ಲಿ ತಂಡದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಆಸಿಸ್ ವಿರುದ್ಧ ಆಡುವಾಗ ಹೆಬ್ಬರಳಿಗೆ ಗಾಯಮಾಡಿಕೊಂಡು ಹೊರ ನಡೆದ್ರು. ಇದು ಟೀಮ್ ಇಂಡಿಯಾಗೆ ದೊಡ್ಡ ಶಾಕ್ ಆಗಿತ್ತು. ಈ ಸಂದರ್ಭದಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಆಡುತ್ತಿದ್ದ ಕೆ.ಎಲ್.ರಾಹುಲ್ ಓಪನರ್ರಾಗಿ ಭಡ್ತಿ ಪಡೆದ್ರು. ಕನ್ನಡಿಗ ರಾಹುಲ್ ಈ ಹಿಂದೆ ಓಪನರ್ರಾಗಿ ಸಾಕಷ್ಟು ಭಾರೀ ಫ್ಲಾಪ್ ಆಗಿದ್ರು. ಈ ಕಾರಣಕ್ಕಾಗಿ ರಾಹುಲ್ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ರೋಹಿತ್ ಮೇಲೆ ಹೆಚ್ಚಿನ ಒತ್ತಡ ಇದ್ದವು. ಆದರೆ ಈ ಎಲ್ಲ ಆತಂಕವನ್ನ ರಾಹುಲ್ ದೂರ ಮಾಡಿದ್ರು.
ಬದ್ಧ ವೈರಿ ಪಾಕ್ ವಿರುದ್ಧ 136 ಭರ್ಜರಿ ಜೊತೆಯಾಟ
ಬದ್ಧ ವೈರಿ ಪಾಕ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಮಹತ್ವದ ಪಂದ್ಯವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್ಗೆ 136 ರನ್ಗಳ ಭರ್ಜರಿ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ರು. ಇದರ ನೆರವಿನಿಂದ ಟೀಮ್ ಇಂಡಿಯಾ 89 ರನ್ಗಳ ಗೆಲುವು ದಾಖಲಿಸಲು ಸಾಧ್ಯವಾಯಿತು.
ಬಾಂಗ್ಲಾ ವಿರುದ್ಧ 180 ರನ್ ದಾಖಲೆಯ ಆಟ
ಮೊನ್ನೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಸೈನ್ಯಕ್ಕೆ ಬಾಂಗ್ಲಾ ವಿರುದ್ಧ ಗೆಲ್ಲಲ್ಲೇಬೇಕಾದ ಒತ್ತಡವನ್ನ ಎದುರಿಸಿತ್ತು. ಅಫ್ಘಾನ್, ಇಂಗ್ಲೆಂಡ್ ವಿರುದ್ಧ ಫ್ಲಾಪ್ ಆಗಿದ್ದ ರೋಹಿತ್ ರಾಹುಲ್ ಬಾಂಗ್ಲಾ ವಿರುದ್ಧ ಮೊದಲ ವಿಕೆಟ್ಗೆ ದಾಖಲೆಯ 180 ರನ್ ಜೊತೆಯಾಟ ನೀಡಿದ ಓಪನಿಂಗ್ ಜೋಡಿ ಹಿರಿಮೆಗೆ ಪಾತ್ರವಾಗಿದೆ. ಜೊತೆಗೆ ಅತಿ ಹೆಚ್ಚು ರನ್ ಬಾರಿಸಿದ ನಾಲ್ಕನೆ ಜೋಡಿ ಎಂಬ ಗೌರವಕ್ಕೆ ಪಾತ್ರವಾಯಿತು.
ಟೀಮ್ ಇಂಡಿಯಾ ಓಪನರ್ಸ್ ಸಾಧನೆ
ರೋಹಿತ್ ಶರ್ಮಾ 7 ಪಂದ್ಯಗಳಿಂದ 544 ರನ್ ಕಲೆ ಹಾಕಿದ್ದಾರೆ. 12 ಅರ್ಧ ಶತಕ ಮತ್ತು 4 ಶತಕಾರಿಸಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್. ರಾಹುಲ್ 7 ಪಂದ್ಯಗಳಿಂದ 249 ರನ್ ಕಲೆ ಹಾಕಿದ್ದು 2 ಅರ್ಧ ಶತಕ ಬಾರಿಸಿದ್ದಾರೆ.
ವಿಶ್ವಕಪ್ ಗೆಲ್ಲಲು ಇನ್ನು ಎರಡು ಮೆಟ್ಟಿಲುಗಳು ಮಾತ್ರ ಬಾಕಿ ಇವೆ. ಈ ಎರಡು ಮೆಟ್ಟಲುಗಳನ್ನ ಹತ್ತಲು ರೋಹಿತ್ ಮತ್ತು ರಾಹುಲ್ ಒಳ್ಳೆಯ ಓಪನಿಂಗ್ ಕೊಡಲೇ ಬೇಕಿದೆ.