ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಕಪ್ ಮಹಾ ಸಂಗ್ರಾಮ ಅರ್ಧ ದಾರಿ ಕ್ರಮಿಸಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ವಿಶ್ವ ಯುದ್ಧ ಲೀಗ್ ಹಂತವನ್ನ ಫೂರ್ಣಗೊಳಿಸುವ ಹಂತಕ್ಕೆ ಬಂದು ನಿಂತಿದೆ.
ಕಳೆದ 38 ದಿನಗಳಿಂದ ನಡೆದ ಈ ಬಾರಿಯ ಮಹಾ ಯುದ್ದ ಹಲವಾರು ರೋಚಕ, ಅಚ್ಚರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಬಲಿಷ್ಠ ತಂಡ ಸೌತ್ ಆಫ್ರಿಕಾ ಕಳಪೆ ಫಾರ್ಮ್ ಕೊಟ್ಟು ಶಾಕ್ ಕೊಟ್ರೆ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಶಿಶು ಅಫ್ಘಾನಿಸ್ತಾನದೆದುರು ತಿಣುಕಾಡಿ ಗೆದ್ದುಕೊಂಡಿದ್ದು ಎಲ್ಲರನ್ನೂ ಅಚ್ಚರಿ ಪಡಿಸಿತು.
ಸೆಮಿಫೈನಲ್ ಪ್ರವೇಶಿಸಲು ಅದೃಷ್ಟ ನೆಚ್ಚಿಕೊಂಡ ಬಲಿಷ್ಠ ತಂಡಗಳು
ಹೌದು ಈ ಬಾರಿಯ ವಿಶ್ವಕಪ್ನ ವಿಶೇಷತೆ ಅಂದ್ರೆ ಬಲಿಷ್ಠ ತಂಡಗಳು ಅದೃಷ್ಟವನ್ನ ನೆಚ್ಚಿಕೊಂಡಿದ್ದು. ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆರಂಭದಲ್ಲಿ ಆಡಿದ ಐದು ಪಂದ್ಯಗಳನ್ನ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕೆಲವು ಪಂದ್ಯಗಳನ್ನ ಕೈಚೆಲ್ಲಿ ಕೊನೆಗೆ ಅದೃಷ್ಟವನ್ನ ನೆಚ್ಚಿಕೊಳ್ಳಬೇಕಾಯ್ತು. ಅದರಲ್ಲೂ ಸರ್ಫರಾಜ್ ನೇತೃತ್ವದ ಪಾಕಿಸ್ತಾನ ತಂಡ ಸೆಮಿಫೈನಲ್ಗೆ ಹೋಗಲು ಪಟ್ಟ ಕಷ್ಟ ಅಷ್ಟಿಷಟಲ್ಲ. ಸರ್ಫ್ರಾಜ್ ಪಡೆಗೆ ಆಂಗ್ಲರೆ ವಿಲನ್ ಆಗಿದ್ರು. ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಆಡುವಾಗ ಕೊಹ್ಲಿ ಸೈನ್ಯ ಗೆಲ್ಲಲ್ಲಿ ಎಂದು ಪ್ರಾರ್ಥನೆ ಮಾಡಿತ್ತು. ಇದು ಫಲ ಕೊಡದಿದ್ದಾಗ ನಂತರ ಆಂಗ್ಲರ ವಿರುದ್ಧ ನ್ಯೂಜಿಲೆಂಡ್ ಆಡುವಾಗ ಕೇನ್ ವಿಲಿಯಮ್ಸನ್ ಪಡೆ ಗೆಲ್ಲಲ್ಲಿ ಅಂತಾ ಪ್ರಾರ್ಥೀಸಿತ್ತು ಆದರೆ ಇದು ಕೈಕೊಟ್ಟಿತ್ತು.
ನಾಲ್ಕನೆ ಸೆಮಿಫೈನಲ್ ಪ್ರವೇಶಿಸುವ ತಂಡ ಯಾವುದು ?
ವಿಶ್ವಕಪ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಲೀಗ್ ಹಂತದ ಕೊನೆಯ ಹಂತದ ಎರಡು ಲೀಗ್ ಪಂದ್ಯಗಳು ಬಾಕಿ ಇದ್ದು , ಆಸ್ಟ್ರೇಲಿಯಾ, ಟೀಮ್ ಇಂಡಿಯಾ ಮತ್ತು ಆತಿಥೇಯ ಇಂಗ್ಲೆಂಡ್ ಸೆಮಿಫಯನಲ್ ತಲುಪಿವೆ.
ಮೊನ್ನೆ ಚೆಸ್ಟರ್ ಲೀ ಸ್ಟ್ರೀಟ್ನಲ್ಲಿ ಆತಿಥೇಯ ಮಾರ್ಗನ್ ಪಡೆ ನ್ಯೂಜಿಲೆಂಡ್ ವಿರುದ್ಧ 119 ರನ್ಗಳ ಗೆಲುವು ದಾಖಲಿಸಿ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಆದ್ರೆ ಇಂದು ನಡೆಯುವ ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಅದ್ಭುತ ನಡೆದರೆ ಮಾತ್ರ ಕಿವೀಸ್ ಸ್ಥಾನದಲ್ಲಿ ಪಾಕಿಸ್ತಾನ ಸೆಮಿಫೈನಲ್ಗೆ ಲಗ್ಗೆ ಇಡೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನಾಲ್ಕನೆ ಸೆಮಿಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋದಕ್ಕೆ ಇಂದು ಉತ್ತರ ಸಿಗಲಿದೆ.
ಸೆಮಿಫೈನಲ್ ಯಾರು ಯಾರ ನಡುವೆ ಫೈಟ್ ಗೊತ್ತಾ ?
ಇದೇ ವಿಷಯ ಈಗ ಕ್ರಿಕೆಟ್ ಅಭಿಮಾನಿಗನ್ನ ತುದಿಗಾಲಲ್ಲಿ ನಿಲ್ಲಿಸಿದೆ. ವಿಶ್ವಕಪ್ ಟೂರ್ನಿ ನಿಯಮದ ಪ್ರಕಾರ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡ ಸೆಮಿಫೈನಲ್ನಲ್ಲಿ ಮುಖಾಮುಖಿಯಾದ್ರೆ, ಎರಡನೇ ಸ್ಥಾನದಲ್ಲಿರು ತಂಡ ಮೂರನೇ ಸ್ಥಾನದಲ್ಲಿರುವ ತಂಡದೊಂದಿಗೆ ಸೆಣೆಸಾಡಬೇಕು.ಸದ್ಯದ ಅಂಕಪಟ್ಟಿಯಲ್ಲಿ ತಂಡಗಳು ತಾವಿರುವ ಸ್ಥಾನದ ಆಧಾರದ ಮೇಲೆ ಹೇಳುವುದಾದರೆ, ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ನಲ್ಲಿ ಕಿವೀಸ್ ಪಡೆಯನ್ನ ಎದುರಿಸಿದ್ರೆ, ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೆಣೆಸಾಡಲಿದೆ.
ಸೆಮಿಯಲ್ಲಿ ಕೊಹ್ಲಿ ಸೈನ್ಯದ ಎದುರಾಳಿ ಯಾರು ಗೊತ್ತಾ ?
ಒಂದು ವೇಳೆ, ಭಾರತ ಶ್ರೀ ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೆ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ. ಆಗ ಮಾತ್ರ ಸೆಮಿಫೈನ್ನಲ್ಲಿ ಕೊಹ್ಲಿ ಮತ್ತು ವಿಲಿಯಮ್ಸನ್ ಹುಡುಗರು ಮುಖಾಮುಖಿಯಾಗಲಿದ್ದು, ಆಸೀಸ್, ಇಂಗ್ಲೆಂಡ್ ವಿರುದ್ಧ ಹೋರಾಡಬೇಕಾಗುತ್ತದೆ.ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಫಿಕ್ಸ್ ಆಗಿದ್ದು, ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಲೀಗ್ ಹಂತದ ಇನ್ನೊಂದು ಪಂದ್ಯ ಬಾಕಿ ಇದ್ದು, ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಟೀಂ ಇಂಡಿಯಾ, ಇಂಗ್ಲೆಂಡ್ ಅಥವಾ ನ್ಯೂಜಿಲ್ಯಾಂಡ್ ತಂಡವನ್ನ ಸೆಮಿಫೈನಲ್ನಲ್ಲಿ ಎದಿರಿಸೋದು ಪಕ್ಕಾ.
ಒಟ್ಟಾರೆ ಇಂದು ಮತ್ತು ನಾಳೆ ನಡೆಯುವ ಪಂದ್ಯಗಳ ಫಲಿತಾಂಶ ಕ್ರಿಕೆಟ್ ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿದೆ.