ಪಿಥೋರಗಢ್(ಉತ್ತರಾಖಂಡ್), ಜು.4 – ನಂದಾದೇವಿ ಶಿಖರಾರೋಹಣಕ್ಕೆ ತೆರಳಿ ನಾಪತ್ತೆಯಾಗಿದ್ದ ಏಳು ಪರ್ವತಾರೋಹಿಗಳ ಮೃತದೇಹವು ಪರ್ವತಾ ಪೂರ್ವ ಭಾಗದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ (ಐಟಿಬಿಪಿ) ಪೊಲೀಸರು ಪತ್ತೆ ಮಾಡಿದ್ದಾರೆ. ಮತ್ತೊಬ್ಬ ಪರ್ವತಾರೋಹಿ ಶವ ಪತ್ತೆಯಾಗಿಲ್ಲ.
ಕಳೆಬರಗಳನ್ನು ಉತ್ತರಾಖಂಡ್‍ನ ಫಿಥೋರಗಡ್‍ನ ನೈನಿ ಸೈನಿ ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ಸುಮಾರು ಎರಡು ತಿಂಗಳ ಬಳಿಕ ನಂದಾ ದೇವಿ ಪೂರ್ವ ಶಿಖರಾಗ್ರದಿಂದ ನಾಪತ್ತೆಯಾದ ಏಳು ಪರ್ವತಾರೋಹಿಗಳ ಮೃತದೇಹಗಳನ್ನು ಪತ್ತೆ ಮಾಡಲಾಯಿತು. ಈ ಶೋಧ ಕಾರ್ಯಾಚರಣೆಗೆ ಮಿಷನ್ ಡೇರ್‍ಡೆವಿಲ್ಸ್ ಎಂದು ಹೆಸರಿಡಲಾಗಿತ್ತು.
ಏಳು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಲ್ಡ್ವಾನಿಯ ಸುಶೀಲಾ ತಿವಾರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಏಳು ಶವಗಳಲ್ಲಿ ಆಸ್ಟ್ರೇಲಿಯಾ ಮಹಿಳಾ ಪರ್ವತಾರೋಹಿ ಮತ್ತು ಭಾರತೀಯ ಮಾರ್ಗದರ್ಶಿಯ ಗುರುತು ಮಾತ್ರ ಪತ್ತೆಯಾಗಿದ್ದು, ಉಳಿದವರ ಚಹರೆ ಗುರುತಿಸುವ ಕಾರ್ಯ ಮುಂದುವರಿದಿದೆ.